Saturday, 27 February 2021

ದೇಶದಲ್ಲಿ `ಕ್ಯಾಚ್ ದಿ ರೈನ್' ಅಭಿಯಾನ ಆರಂಭಿಸುತ್ತೇವೆ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮಾತು

 

ದೇಶದಲ್ಲಿ `ಕ್ಯಾಚ್ ದಿ ರೈನ್' ಅಭಿಯಾನ ಆರಂಭಿಸುತ್ತೇವೆ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮಾತು

ನವದೆಹಲಿ : ನೀರಿನ ಸಂರಕ್ಷಣೆ ಕಡೆಗಿರುವ ನಮ್ಮ ಜವಾಬ್ದಾರಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇನ್ನು ಕೆಲವು ದಿನಗಳಲ್ಲಿ ಕ್ಯಾಚ್ ದಿ ರೈನ್ ಎಂದು ಅಭಿಯಾನ ಆರಂಭಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು 74 ನೇ ಆವೃತ್ತಿಯ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಶೀಘ್ರದಲ್ಲೇ ಕ್ಯಾಚ್ ದಿ ರೈನ್ ಎಂಬ ಅಭಿಯಾನವನ್ನು ಆರಂಭಿಸಲಾಗುತ್ತದೆ. ಕ್ಯಾಚ್ ದಿ ರೈನ್ ಎಂಬುದು ಅಭಿಯಾನದ ಘೋಷ ವಾಕ್ಯ ಆಗಲಿದೆ ಎಂದು ಹೇಳಿದರು.

ಮಾರ್ಚ್ 22 ರಂದು ವಿಶ್ವ ಜಲ ದಿವಸ ಆಚರಣೆ ಮಾಡಲಿದ್ದೇವೆ. ಮಾಘ್ ತಿಂಗಳನ್ನು ನೀರಿನೊಂದಿಗೆ ಸಂಯೋಜಿಸುವುದು ಎಂದರೆ. ಈ ತಿಂಗಳ ಚಳಿಗಾಲದ ನಂತರ ಬೇಸಿಗೆ ಪ್ರಾರಂಭವಾಗುತ್ತದೆ. ಹೀಗಾಗಿ ನಾವೆಲ್ಲರೂ ನೀರಿನ ಸಂರಕ್ಷಣೆ ಮಾಡಬೇಕಿದೆ ಎಂದರು.


SHARE THIS

Author:

0 التعليقات: