Saturday, 13 February 2021

ರಾಜ್ಯಕ್ಕೆ ವಿಶ್ವದ ಶ್ರೀಮಂತ ಉದ್ಯಮಿ ಸಂಸ್ಥೆಯಿಂದ ಗುಡ್ ನ್ಯೂಸ್: ಟೆಸ್ಲಾ ಘಟಕ ಸ್ಥಾಪನೆ -ಸಿಎಂ ಮಾಹಿತಿ


ರಾಜ್ಯಕ್ಕೆ ವಿಶ್ವದ ಶ್ರೀಮಂತ ಉದ್ಯಮಿ ಸಂಸ್ಥೆಯಿಂದ ಗುಡ್ ನ್ಯೂಸ್: ಟೆಸ್ಲಾ ಘಟಕ ಸ್ಥಾಪನೆ -ಸಿಎಂ ಮಾಹಿತಿ

ಬೆಂಗಳೂರು: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಎಲೆಕ್ಟ್ರಿಕ್ ಕಾರ್ ತಯಾರಿಕಾ ಸಂಸ್ಥೆ ಟೆಸ್ಲಾ ವತಿಯಿಂದ ರಾಜ್ಯದಲ್ಲಿ ಕಾರ್ ಉತ್ಪಾದನಾ ಘಟಕ ಆರಂಭಿಸಲಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಕುರಿತು ಮಾಹಿತಿ ನೀಡಿದ್ದು. ತುಮಕೂರಿನಲ್ಲಿ 7725 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಸೇರಿದಂತೆ ರಾಜ್ಯದ ಅನೇಕ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಅವರು ರಾಜ್ಯದಲ್ಲಿ ಟೆಸ್ಲಾ ಕಾರ್ ತಯಾರಿಕಾ ಘಟಕ ಆರಂಭಿಸುವ ಬಗ್ಗೆ ಖಚಿತಪಡಿಸಿದ್ದಾರೆ.SHARE THIS

Author:

0 التعليقات: