Tuesday, 16 February 2021

ಇಂಧನದ ಮೇಲಿನ 'ಮೋದಿ ತೆರಿಗೆ' ವಾಪಸ್ ಪಡೆಯಿರಿ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

 

ಇಂಧನದ ಮೇಲಿನ 'ಮೋದಿ ತೆರಿಗೆ' ವಾಪಸ್ ಪಡೆಯಿರಿ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

ನವದೆಹಲಿ: ದಿನದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಧನದ ಮೇಲಿನ ಮೋದಿ ತೆರಿಗೆಯನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ಕಳೆದ ಆರು ವರ್ಷಗಳಿಂದ ಹೆಚ್ಚುವರಿ ಹೊರೆಯಾಗಿ ಇಂಧನದ ಮೇಲೆ ಮೋದಿ ಟ್ಯಾಕ್ಸ್ ವಿಧಿಸಲಾಗುತ್ತಿದೆ. ಹೀಗಾಗಿ ಸಾಮಾನ್ಯ ಗ್ರಾಹಕನ ಮೇಲೆ ಪ್ರತಿ ಲೀಟರ್ ಪೆಟ್ರೋಲ್ ಗೆ 23.78 ರೂ ಹಾಗೂ ಡಿಸೇಲ್ ಗೆ 28.37 ರೂ ಹೆಚ್ಚುವರಿ ಹೊರೆಯಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಕೇರಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕಳೆದ ಆರು ವರ್ಷ ಮತ್ತು ಎಂಟು ತಿಂಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುವ ಮೂಲಕ ಸಾಮಾನ್ಯ ಜನರಿಂದ 20 ಸಾವಿರ ಕೋಟಿ ರೂ ಹಣ ಲೂಟಿ ಮಾಡಿದ್ದಾರೆ ಖೇರಾ ಆರೋಪಿಸಿದ್ದಾರೆ.SHARE THIS

Author:

0 التعليقات: