Friday, 5 February 2021

ಕಾಮೆಡಿಯನ್ ಮುನವ್ವರ್ ಫಾರೂಕಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್

 

ಕಾಮೆಡಿಯನ್ ಮುನವ್ವರ್ ಫಾರೂಕಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಹಿಂದೂ ಧರ್ಮದ ದೇವತೆಗಳನ್ನು ಮತ್ತು ಗೃಹ ಸಚಿವ ಅಮಿತ್ ಶಾರನ್ನು ನಿಂದಿಸಿದ್ದಾರೆಂಬ ಆರೋಪದ ಮೇರೆಗೆ ಬಂಧಿಸಲಾಗಿದ್ದ ಕಾಮೆಡಿಯನ್ ಮುನವ್ವರ್ ಫಾರೂಕಿ ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಹಿಂದೆ ಮೂರು ಬಾರಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಜನವರಿ ೨೮ರಂದು ಮಧ್ಯಪ್ರದೇಶ ಹೈಕೋರ್ಟ್‌ ಮುನವ್ವರ್‌ ಗೆ ಜಾಮೀನು ನಿರಾಕರಿಸಿತ್ತು. 

ಬಿಜೆಪಿ ಶಾಸಕನ ಪುತ್ರ ಏಕಲವ್ಯ ಸಿಂಗ್‌ ಗೌರ್‌ ಎಂಬಾತ ನೀಡಿದ ದೂರಿನ ಮೇರೆಗೆ ಇಂಧೋರ್‌ ನಲ್ಲಿ ನಡೆಯುತ್ತಿದ್ದ ಸ್ಟ್ಯಾಂಡಪ್‌ ಕಾಮಿಡಿ ಕಾರ್ಯಕ್ರಮದ ಮಧ್ಯೆಯೇ ಮುನವ್ವರ್‌ ರನ್ನು ಬಂಧಿಸಲಾಗಿತ್ತು. ಪೊಲೀಸರು ಮುನವ್ವರ್‌ ವಿರುದ್ಧ ಆರೋಪಗಳಿಲ್ಲ ಎಂದಿದ್ದರೂ ನ್ಯಾಯಾಳಯ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.


SHARE THIS

Author:

0 التعليقات: