Tuesday, 2 February 2021

ರಾಜ್ಯದಲ್ಲಿ 'ACB' ಭರ್ಜರಿ ಕಾರ್ಯಾಚರಣೆ : ಏಳು ಅಧಿಕಾರಿಗಳ ಮನೆ ಮೇಲೆ ದಾಳಿ : ಅಪಾರ ಪ್ರಮಾಣದ ಆಸ್ತಿ, ಹಣ ಜಪ್ತಿ


ರಾಜ್ಯದಲ್ಲಿ 'ACB' ಭರ್ಜರಿ ಕಾರ್ಯಾಚರಣೆ : ಏಳು ಅಧಿಕಾರಿಗಳ ಮನೆ ಮೇಲೆ ದಾಳಿ : ಅಪಾರ ಪ್ರಮಾಣದ ಆಸ್ತಿ, ಹಣ ಜಪ್ತಿ

ಬೆಂಗಳೂರು : ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಳು ಮಂದಿ ಅಧಿಕಾರಿಗಳ ಮೇಲೆ 30 ಸ್ಥಳದಲ್ಲಿ ಎಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಪಾಂಡುರಂಗ ಗರಗ್, ಜಯರಾಜ್ ( ಜಂಟಿ ನಿರ್ದೇಶಕ , ಮಂಗಳೂರು ಮಹಾನಗರ ಪಾಲಿಕೆ ) ದೇವರಾಜ್ ( ಎಕ್ಸಿಕ್ಯೂಟಿವ್ ಎಂಜಿನಿಯರ್ , ಸಣ್ಣ ನೀರಾವರಿ ಇಲಾಖೆ ಧಾರವಾಡ ವಿಭಾಗ) ಎಸ್ ಎನ್ ವಿಜಯ ಕುಮಾರ ( ಡಿ ಹೆಚ್ ಒ ಕೋಲಾರ) ಶ್ರೀನಿವಾಸ್ ( ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧಾರವಾಡ) ಹಾಗೂ ಚೆನ್ನ ಬಸಪ್ಪ ( ಜ್ಯೂನಿಯರ್ ಎಂಜಿನಿಯರ್ ರಾಮನಗರ ಲೋಕೋಪಯೋಗಿ ಇಲಾಖೆ) ಡಾ.ಶ್ರೀನಿವಾಸ್ ( ವಿಂಸ್ ಮಾಜಿ ನಿರ್ದೇಶಕ ಕೊಪ್ಪಳ) ಇವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಭಾರೀ ಪ್ರಮಾಣದ ಆಸ್ತಿ, ಹಣ. ಚಿನ್ನಾಭರಣ , ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.



SHARE THIS

Author:

0 التعليقات: