Tuesday, 2 February 2021

ರಾಮನ ಭಾರತದಲ್ಲಿ ಪೆಟ್ರೋಲ್‌ ಬೆಲೆ ₹93, ರಾವಣನ ಲಂಕೆಯಲ್ಲಿ ₹51: ಸ್ವಾಮಿ ಟೀಕೆ

 

ರಾಮನ ಭಾರತದಲ್ಲಿ ಪೆಟ್ರೋಲ್‌ ಬೆಲೆ ₹93, ರಾವಣನ ಲಂಕೆಯಲ್ಲಿ ₹51: ಸ್ವಾಮಿ ಟೀಕೆ

ದೆಹಲಿ: ಪೆಟ್ರೋಲ್‌ ದರ ಏರಿಕೆ ಬಗ್ಗೆ ಆಗಾಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವ ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಈಗ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.

ಈ ಕುರಿತು ಮಂಗಳವಾರ ಬೆಳಗ್ಗೆ ಟ್ವೀಟ್‌ ಮಾಡಿರುವ ಅವರು, 'ರಾಮನ ಭಾರತದಲ್ಲಿ ಪೆಟ್ರೋಲ್‌ ದರ ₹93, ಸೀತೆಯ ನೇಪಾಳದಲ್ಲಿ ₹53, ರಾವಣನ ಶ್ರೀಲಂಕಾದಲ್ಲಿ ₹51,' ಎಂದು ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸ್ವಾಮಿ ಅವರ ಟ್ವೀಟ್‌ ಅನ್ನು ಮಂಗಳವಾರ ಮಧ್ಯಾಹ್ನದ ಹೊತ್ತಿಗೆ 57 ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದರೆ, 15 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್‌ ಮಾಡಿಕೊಂಡಿದ್ದಾರೆ.SHARE THIS

Author:

0 التعليقات: