Saturday, 13 February 2021

ತಪೋವನ ಸುರಂಗದಲ್ಲಿ 8 ದಿನದಿಂದ ಶೋಧ: 2 ಮೃತದೇಹ ಪತ್ತೆ - ಇನ್ನೂ ಸಿಕ್ಕಿಲ್ಲ ನಾಪತ್ತೆಯಾದ 166 ಜನರ ಸುಳಿವು


ತಪೋವನ ಸುರಂಗದಲ್ಲಿ 8 ದಿನದಿಂದ ಶೋಧ: 2 ಮೃತದೇಹ ಪತ್ತೆ - ಇನ್ನೂ ಸಿಕ್ಕಿಲ್ಲ ನಾಪತ್ತೆಯಾದ 166 ಜನರ ಸುಳಿವು


ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಪೋವನ ಸುರಂಗದ ಬಳಿ ಇಂದು 2 ಮೃತದೇಹಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಸ್ವಾತಿ ಭದೋರಿಯಾ ಮಾಹಿತಿ ನೀಡಿದ್ದಾರೆ.


ಫೆಬ್ರವರಿ 7 ರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ತಪೋವನ ಮುಖ್ಯ ಸುರಂಗದ ಬಳಿ ಕೊಳೆತ ಸ್ಥಿತಿಯಲ್ಲಿದ್ದ ಎರಡು ದೇಹಗಳು ಪತ್ತೆಯಾಗಿವೆ. ಉತ್ತರಾಖಂಡ್ ಪೊಲೀಸರು, ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ಸಿಬ್ಬಂದಿ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.


ಇದುವರೆಗೆ 38 ಮೃತದೇಹ ಪತ್ತೆಯಾಗಿದ್ದು, 166 ಮಂದಿ ನಾಪತ್ತೆಯಾಗಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ.SHARE THIS

Author:

0 التعليقات: