ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪನ, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲು
ನವದೆಹಲಿ: ಶುಕ್ರವಾರ ರಾತ್ರಿ ದೆಹಲಿ, ಜಮ್ಮು ಕಾಶ್ಮೀರ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ ಸೇರಿದಂತೆ ಉತ್ತರ ಭಾರತದಹಲವೆಡೆ ಪ್ರಬಲ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದ್ದು, ಭೂಕಂಪನದ ಕೇಂದ್ರ ಬಿಂದು ತಜಿಕಿಸ್ತಾನ ಎನ್ನಲಾಗಿದ್ದು, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ದೆಹಲಿ-ಎನ್ ಸಿಆರ್ ಮತ್ತು ಉತ್ತರಾಖಂಡದಲ್ಲಿ ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪದ ಅನುಭವವಾಗಿದೆ ಅಂತ ತಿಳಿದು ಬಂದಿದೆ.
ಭಾರತೀಯ ಮೆಟ್ರೊಲಾಜಿಕಲ್ ಡಿಪಾರ್ಟ್ ಮೆಂಟ್ (ಐಎಂಡಿ) ಪ್ರಕಾರ, ಭೂಕಂಪದ ಕೇಂದ್ರ ತಾಜಿಕಿಸ್ತಾನದಲ್ಲಿತ್ತು ಎನ್ನಲಾಗಿದೆ. ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ದತೀವ್ರತೆ ಯನ್ನು ಅಂದಾಜಿಸಿದೆ ಎಂದು ಐಎಂಡಿ ತಿಳಿಸಿದೆ. ರಾತ್ರಿ 10.31 ಕ್ಕೆ (IST) ಮತ್ತು ಅದರ ಸಂಯೋಜಕಗಳು 38.00 N ಮತ್ತು 73.58 E. ಈ ಭೂಕಂಪದ ಆಳ 74 ಕಿ.ಮೀ. ಎನ್ನಲಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, 'ದೆಹಲಿಯಲ್ಲಿ ಭೂಕಂಪದ ಅನುಭವವಾಗಿದೆ. ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಅಂತ ಹೇಳಿದ್ದಾರೆ.
0 التعليقات: