Saturday, 20 February 2021

ಪುಣೆ ಕಾರ್ಖಾನೆಯಲ್ಲಿ‌ ಅಗ್ನಿ ಅವಘಡ: ಸ್ಥಳಕ್ಕೆ 6 ಅಗ್ನಿಶಾಮಕ ದಳಗಳು ದೌಡು..!

 

ಪುಣೆ ಕಾರ್ಖಾನೆಯಲ್ಲಿ‌ ಅಗ್ನಿ ಅವಘಡ: ಸ್ಥಳಕ್ಕೆ 6 ಅಗ್ನಿಶಾಮಕ ದಳಗಳು ದೌಡು..!

ಮಹಾರಾಷ್ಟ್ರ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸನಸ್ವಾಡಿ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ. ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಆರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದ್ದು, ಅಗ್ನಿಶಾಮಕ ದಳದ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ವಿವರಗಳನ್ನ ನಿರೀಕ್ಷಿಸಲಾಗ್ತಿದೆ.


SHARE THIS

Author:

0 التعليقات: