Sunday, 21 February 2021

ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಇಂದಿನಿಂದ 6 - 8 ನೇ ತರಗತಿ ಶುರು


ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಇಂದಿನಿಂದ 6 - 8 ನೇ ತರಗತಿ ಶುರು

ಬೆಂಗಳೂರು: ಮೊದಲ ಹಂತದಲ್ಲಿ 9, 10 ನೇ ತರಗತಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ.

ರಾಜ್ಯದಲ್ಲಿ ಇಂದಿನಿಂದ 6 - 8 ನೇ ತರಗತಿ ಶಾಲೆಗಳು ಕೂಡ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ. ಕೇರಳ ಗಡಿ ಭಾಗ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟನೇ ತರಗತಿ ಮಾತ್ರ ಪೂರ್ಣಪ್ರಮಾಣದಲ್ಲಿ ಆರಂಭವಾಗಲಿದ್ದು, 6 ಮತ್ತು 7ನೇ ತರಗತಿಗಳಿಗೆ ವಿದ್ಯಾಗಮ ಕಲಿಕೆ ಮುಂದುವರೆಯಲಿದೆ.

ಕೊರೊನಾ ಸುರಕ್ಷಿತ ಕ್ರಮಗಳೊಂದಿಗೆ ಶಾಲೆ ಆರಂಭಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಂದಿನಿಂದ 6 - 8 ತರಗತಿ ಶುರುವಾಗಲಿವೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ಶಾಲೆ ನಡೆಸಲು ತಿಳಿಸಲಾಗಿದೆ.


SHARE THIS

Author:

0 التعليقات: