Tuesday, 16 February 2021

ರಾಜ್ಯ ಸರ್ಕಾರದಿಂದ 6 ರಿಂದ 8ನೇ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ : ಫೆ.22ರಿಂದ ತರಗತಿ ಆರಂಭ


 ರಾಜ್ಯ ಸರ್ಕಾರದಿಂದ 6 ರಿಂದ 8ನೇ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ : ಫೆ.22ರಿಂದ ತರಗತಿ ಆರಂಭ

ಬೆಂಗಳೂರು : ಈಗಾಗಲೇ 9 ರಿಂದ 12ನೇ ತರಗತಿ ಶಾಲೆಗಳು ಆರಂಭಗೊಂಡಿವೆ. ಈ ಬಳಿಕ ಇದೀಗ ರಾಜ್ಯದಲ್ಲಿ ಫೆಬ್ರವರಿ 22ರಿಂದ 6 ರಿಂದ 8ನೇ ತರಗತಿ ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ರಾಜ್ಯದಲ್ಲಿ 9 ರಿಂದ 12ನೇ ತರಗತಿ ಆರಂಭದ ಬಳಿಕ, ಈಗ 6 ರಿಂದ 8ನೇ ತರಗತಿ ಆರಂಭಿಸಲಾಗುತ್ತಿದೆ. 1 ರಿಂದ 5ನೇ ತರಗತಿಯವರೆಗೆ ವಿದ್ಯಾಗಮದ ಮೂಲಕ ಶೈಕ್ಷಣಿಕ ಕಲಿಕೆ ಮುಂದುವರೆಯಲಿದೆ ಎಂದರು.

ಇನ್ನೂ ಸಿ ಬಿ ಎಸ್ ಸಿ ಇ ಶೈಕ್ಷಣಿಕ ತರಗತಿಗಳು ಏಪ್ರಿಲ್ 1ರಿಂದ ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ. ಕೊರೋನಾ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕೊರೋನಾ ಪರೀಕ್ಷೆ ಕಡ್ಡಾಯವಾಗಿದೆ ಎಂದು ತಿಳಿಸಿದರು.



SHARE THIS

Author:

0 التعليقات: