Monday, 15 February 2021

ಹಲವು ವಾಹನಗಳಿಗೆ ಕಂಟೈನರ್ ಟ್ರಕ್ ಢಿಕ್ಕಿ: ಒಂದೇ ಕುಟುಂಬದ ನಾಲ್ವರು ಸೇರಿ 5 ಮಂದಿ ಮೃತ್ಯು


 ಹಲವು ವಾಹನಗಳಿಗೆ ಕಂಟೈನರ್ ಟ್ರಕ್ ಢಿಕ್ಕಿ: ಒಂದೇ ಕುಟುಂಬದ ನಾಲ್ವರು ಸೇರಿ 5 ಮಂದಿ ಮೃತ್ಯು

ಮುಂಬೈ: ರಾಯಗಢ ಜಿಲ್ಲೆಯ ಖೊಪೋಲಿ ಸಮೀಪದ ಪುಣೆ-ಮುಂಬೈ ಎಕ್ಸ್ ಪ್ರಸ್ ವೇ ನಲ್ಲಿ ಮಂಗಳವಾರ ಬೆಳಗ್ಗಿನಜಾವ ಕಂಟೈನರ್ ಟ್ರಕ್ ವೊಂದು ಹಲವು ವಾಹನಗಳಿಗೆ ಢಿಕ್ಕಿಯಾದ ಪರಿಣಾಮ ನವಿ ಮುಂಬೈನ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐದು ಮಂದಿ ಮೃತಪಟ್ಟಿದ್ದು, ಇನ್ನೂ ಐವರು ಗಂಭೀರ ಗಾಯಗೊಂಡಿದ್ದಾರೆ.

ರಾಯಗಢ ಜಿಲ್ಲಾ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರಾತ್ರಿ 1ರ ಸುಮಾರಿಗೆ ಮುಂಬೈನತ್ತ ತೆರಳುತ್ತಿದ್ದ ಕಂಟೈನರ್ ಟ್ರಕ್ ಕನಿಷ್ಠ ಎರಡು ಕಾರುಗಳು ಹಾಗೂ ಎರಡು ಟ್ರಕ್ ಗಳಿಗೆ ಢಿಕ್ಕಿಯಾಗಿದೆ. ಎಲ್ಲ ವಾಹನಗಳಿಗೆ ಬಹಳಷ್ಟು ಹಾನಿಯಾಗಿದೆ.

ಗಾಯಗೊಂಡವರನ್ನು ಖೊಪೊಲಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರು ಮೃತಪಟ್ಟಿದ್ದರೆ, ಇನ್ನೂ ಐವರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೃತಪಟ್ಟವರನ್ನು ಡಾ.ವೈಭವ್ ವಸಂತ್(40 ವರ್ಷ) ವೈಭವ್ ತಾಯಿ ಉಷಾವಸಂತ್(63), ಪತ್ನಿ ವೈಶಾಲಿ(38) ಹಾಗೂ ಪುತ್ರಿ ಶ್ರೇಯಾ(5) ಹಾಗೂ ಮುಂಬೈ ಗೋರೆಗಾಂವ್ ನಿವಾಸಿ ಮಂಜು ಪ್ರಕಾಶ್(58)ಎಂದು ಗುರುತಿಸಲಾಗಿದೆ. ಡಾ. ವೈಭವ್ ಅವರ ಪುತ್ರ ಅರ್ನವ್ ಗಂಭೀರ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾನೆ.
SHARE THIS

Author:

0 التعليقات: