ಉತ್ತರಾಖಂಡ ಹಿಮದುರಂತ : ಮೃತರ ಸಂಖ್ಯೆ 38 ಕ್ಕೆ ಏರಿಕೆ ; ಮುಂದುವರೆದ ಕಾರ್ಯಾಚರಣೆ
ಉತ್ತರಾಖಂಡ್: ಉತ್ತರಾಖಂಡದಲ್ಲಿ ಹಿಮಪಾತದಿಂದಾಗಿ ಉಂಟಾದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ಚಮೋಲಿ ಜಿಲ್ಲೆಯ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಈವರೆಗೆ ವಿವಿಧ ಸ್ಥಳಗಳಲ್ಲಿ 38 ಶವಗಳು ಪತ್ತೆಯಾಗಿದ್ದು, ಇನ್ನೂ 180 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಡೆಹರಾಡೂನ್ನ ರಾಜ್ಯ ತುರ್ತು ನಿಯಂತ್ರಣ ಕೇಂದ್ರ ತಿಳಿಸಿದೆ.
ದುರಂತದ ನಂತರ ಸುರಂಗದಲ್ಲಿ ಸಿಲುಕಿರುವ 25-35 ಜನರ ರಕ್ಷಣಾ ಕಾರ್ಯ ಮುಂದುವರೆದಿದ್ದು, ರಕ್ಷಣಾ ತಂಡಗಳು ಅವರ ರಕ್ಷಣೆಗಾಗಿ ಡ್ರೋನ್ಗಳು ಮತ್ತು ರಿಮೋಟ್ ಸೆನ್ಸಿಂಗ್ ಸಾಧನಗಳನ್ನ ಬಳಸಿಕೊಂಡು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
0 التعليقات: