Sunday, 7 February 2021

ಮೊದಲ ಟೆಸ್ಟ್: ಭಾರತ 337 ರನ್ ಗೆ ಆಲೌಟ್, ಇಂಗ್ಲೆಂಡಿಗೆ ಇನಿಂಗ್ಸ್ ಮುನ್ನಡೆ

 

ಮೊದಲ ಟೆಸ್ಟ್: ಭಾರತ 337 ರನ್ ಗೆ ಆಲೌಟ್, ಇಂಗ್ಲೆಂಡಿಗೆ ಇನಿಂಗ್ಸ್ ಮುನ್ನಡೆ

ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನ 578 ರನ್ ಗೆ ಉತ್ತರವಾಗಿ ಭಾರತವು ಮೊದಲ ಇನಿಂಗ್ಸ್ ನಲ್ಲಿ 337 ರನ್ ಗೆ ಆಲೌಟಾಗಿ ಇನಿಂಗ್ಸ್ ಹಿನ್ನಡೆ ಕಂಡಿದೆ.

ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ 4ನೇ ದಿನವಾದ ಸೋಮವಾರ 6 ವಿಕೆಟ್‍ಗಳ ನಷ್ಟಕ್ಕೆ 257 ರನ್ ನಿಂದ ಇನಿಂಗ್ಸ್ ಮುಂದುವರಿಸಿದ ಭಾರತವು  ಆಲ್‍ರೌಂಡರ್ ವಾಷಿಂಗ್ಟನ್ ಸುಂದರ್ ಅರ್ಧಶತಕ(ಔಟಾಗದೆ 85,138 ಎಸೆತ, 12 ಬೌಂಡರಿ, 2 ಸಿಕ್ಸರ್)ಕೊಡುಗೆಯ ಹೊರತಾಗಿಯೂ 95.5 ಓವರ್ ಗಳಲ್ಲಿ 337 ರನ್ ಗೆ ಆಲೌಟಾಯಿತು. ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 241 ರನ್ ಮುನ್ನಡೆ ಪಡೆದಿದೆ.

ಇಂಗ್ಲೆಂಡ್ ಪರ ಡಾಮ್ ಬೆಸ್ (4-76) ಯಶಸ್ವಿ ಬೌಲರ್ ಎನಿಸಿಕೊಂಡರೆ ಜೇಮ್ಸ್ ಆ್ಯಂಡರ್ಸನ್ (2-46), ಜೋಫ್ರಾ ಆರ್ಚರ್(2-75) ಹಾಗೂ ಜಾಕ್ ಲೀಚ್(2-105)ತಲಾ ಎರಡು ವಿಕೆಟ್ ಪಡೆದರು


SHARE THIS

Author:

0 التعليقات: