Thursday, 25 February 2021

ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಾನು 30 ವರ್ಷದಿಂದ ಗಾಳ ಹಾಕುತ್ತಿದ್ದೆ- ಡಿಕೆಶಿ

 

ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಾನು 30 ವರ್ಷದಿಂದ ಗಾಳ ಹಾಕುತ್ತಿದ್ದೆ- ಡಿಕೆಶಿ

ಬೆಂಗಳೂರು: ಶರತ್ ಬಚ್ಚೇಗೌಡ ಬಾಹ್ಯ ಬೆಂಬಲ ಕೊಟ್ಟಿದ್ದಾರೆ. ಶಾಸಕಾಂಗ ಪಕ್ಷದ ನಾಯಕರಿಗೆ ಪತ್ರ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.

ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್, ರಮೇಶ್ ಕುಮಾರ್, ಕೃಷ್ಣಭೈರೇಗೌಡ, ಜಮೀರ್​ ಅಹ್ಮದ್, ಸಲೀಂ ಅಹ್ಮದ್ ಮುಖಂಡರು ಸಮ್ಮುಖದಲ್ಲಿ​ ಶರತ್​ ಬಚ್ಚೇಗೌಡ ಅವರು ಕಾಂಗ್ರೆಸ್ ಸಹ ಸದಸ್ಯನಾಗಿ ಸೇರ್ಪಡೆಗೊಂಡರು.

ಬಳಿಕ ಮಾತನಾಡಿದ ಅವರು, ನಾನು 30 ವರ್ಷದಿಂದ ಗಾಳ ಹಾಕುತ್ತಿದ್ದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಹಾಕುತ್ತಿದ್ದೆ. ಆದರೆ, ಗಾಳಕ್ಕೆ ಯಾರೂ ಬಿದ್ದಿರಲಿಲ್ಲ. ಆದರೆ, ಇವತ್ತು ನೀವೆಲ್ಲರೂ ಗಾಳಕ್ಕೆ ಬಿದ್ದಿದ್ದೀರ. ನಮ್ಮ ಬೆಂಬಲವನ್ನ ನೀವು ಕೋರಿದ್ದೀರ. ನಾವು ಕೂಡ ಅಧಿಕೃತ ಬೆಂಬಲ ನಿಮಗೆ ನೀಡುತ್ತೇವೆ ಎಂದಿದ್ದಾರೆ.

ಇದು ಪಕ್ಷದ ಕಾರ್ಯಕ್ರಮವಲ್ಲ, ಇದು ಶಾಸಕಾಂಗಪಕ್ಷದ ಕಾರ್ಯಕ್ರಮ. ಕ್ಷೇತ್ರದ ಅಭಿವೃದ್ಧಿಗೆ ನೀವೆಲ್ಲರೂ ದುಡಿಯಬೇಕು. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಜನರ ಬಾಗಿಲನ್ನ ಸರ್ಕಾರ ಬಡಿಯುತ್ತಿದೆ ಇದಕ್ಕೆ ಮುಕ್ತಿ ಕೊಡಬೇಕಾದ್ರೆ ನಾವು ಹೋರಾಡಬೇಕು ಎಂದು ಹೊಸಕೋಟೆ ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಅವರು ಕರೆ ನೀಡಿದ್ದಾರೆ.


SHARE THIS

Author:

0 التعليقات: