ಮುಹಿಮ್ಮಾತ್ ಸ್ಥಾಪಕ ದಿನ:
30 ಧ್ವಜಗಳು ಬಾನೆತ್ತರಕ್ಕೆ
ಕಾಸರಗೋಡು : ಮುಹಿಮ್ಮಾತುಲ್ ಮುಸ್ಲಿಮೀನ್ ಎಜ್ಯುಕೇಶನ್ ಸೆಂಟರಿನ 30 ನೇ ಸ್ಥಾಪಕ ದಿನ ಆಚರಣೆಗೆ ಸಡಗರದ ಆರಂಭ. 1992 ರಲ್ಲಿ ಸ್ಥಾಪಿತವಾದ ಮುಹಿಮ್ಮಾತಿಗೆ ಇದೀಗ 29 ವರ್ಷ ಪೂರ್ತಿಯಾಗಿದೆ. 30 ನೇ ವಾರ್ಷಿಕ ಸಂಭ್ರಮಕ್ಕೆ ಚಾಲನೆ ನೀಡುತ್ತಾ 30 ಧ್ವಜಗಳು ಬಾನೆತ್ತರಕ್ಕೆ ಹಾರಿದವು. ಸಂಸ್ಥೆಯ ಶಿಲ್ಪಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಮಖಾಂ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಪ್ರಾರಂಭ ನೀಡಲಾಯಿತು. ಝಿಯಾರತಿಗೆ ಮುಹಿಮ್ಮಾತ್ ವೈಸ್ ಪ್ರೆಸಿಡೆಂಟ್ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ನೇತೃತ್ವ ವಹಿಸಿದರು. ಮುಹಿಮ್ಮಾತ್ ಜನರಲ್ ಸೆಕ್ರೆಟರಿ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ, ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ವೈಸ್ ಪ್ರೆಸಿಡೆಂಟ್ ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಕುಞ್ಞಿ ಮುಹಮ್ಮದ್ ಸಖಾಫಿ ಪರವೂರ್ ಭಾಷಣ ಮಾಡಿದರು. ಹಾಜಿ ಅಮೀರಲಿ ಚೂರಿ, ಎಂ ಅಂದುಞ್ಞಿ ಮೊಗರ್, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಿ.ಎನ್ ಅಬ್ದುಲ್ ಖಾದರ್ ಮಾಸ್ಟರ್, ಉಮರ್ ಸಖಾಫಿ ಕರ್ನೂರ್, ಸಯ್ಯಿದ್ ಅನ್ವರ್ ಅಹ್ದಲ್ ತಂಙಳ್, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಅಬ್ದುಸ್ಸಲಾಂ ಅಹ್ಸನಿ, ಸಿ.ಹೆಚ್ ಮುಹಮ್ಮದ್ ಕುಞ್ಞಿ ಪಟ್ಲ, ಶಾಫಿ ಹಾಜಿ ಮುಹಿಮ್ಮಾತ್ ನಗರ್, ಕಬೀರ್ ಕಿನ್ನಿಂಗಾರ್, ಕಂದಲ್ ಸೂಫಿ ಮದನಿ, ಅಬೂಬಕರ್ ಕಾಮಿಲ್ ಸಖಾಫಿ ಪಾವುರಡ್ಕ, ಜೀಲಾನಿ ಅಬ್ದುರ್ರಹ್ಮಾನ್ ಹಾಜಿ, ಅಬೂಬಕರ್ ಗುಡೈ, ಮುಸ್ತಫ ಸಖಾಫಿ ಮುಂತಾದವರು ಧ್ವಜಾರೋಹಣ ನಡೆಸಿದರು. ಇಂದು ಮಧ್ಯಾಹ್ನ 1 ಗಂಟೆಗೆ ಪ್ರವಾಸಿ ಸಂಗಮ ನಡೆಯಲಿದೆ. ವಿವಿಧ ರಾಷ್ಟ್ರಗಳ ಪ್ರವಾಸಿ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸುವರು.
0 التعليقات: