Monday, 1 February 2021

ಆಸ್ಟ್ರೇಲಿಯ ಕಾಡ್ಗಿಚ್ಚು : 30 ಮನೆಗಳು ನಾಶ, 60 ಕಿ.ಮೀ. ವ್ಯಾಪಿಸಿದ ಬೆಂಕಿ

 

ಆಸ್ಟ್ರೇಲಿಯ ಕಾಡ್ಗಿಚ್ಚು : 30 ಮನೆಗಳು ನಾಶ, 60 ಕಿ.ಮೀ. ವ್ಯಾಪಿಸಿದ ಬೆಂಕಿ

ಪರ್ತ್, ಫೆ.2 (ಎಪಿ)- ಪಶ್ಚಿಮ ಕರಾವಳಿ ನಗರವಾದ ಪರ್ತ್‍ನ ಈಶಾನ್ಯಕ್ಕೆ ಧಗಧನೆ ಉರಿಯುತ್ತಿರುವ ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು ಅಂದಾಜು 40 ಮನೆಗಳು ಸುಟ್ಟು ಭಸ್ಮ ಮಾಡಿದೆ. ಮತ್ತಷ್ಟು ಮನೆಗಳ ನಾಶ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಅನೇಕ ಸ್ಥಳೀಯರುವ ಬೇರೆಡೆಗೆ ತೆರಳಲು ಸಿದ್ಧರಾಗಿದ್ದಾರೆ. ಸೋಮವಾರ ಹೊತ್ತಿಕೊಂಡ ಕಾಡ್ಗಿಚ್ಚು 60 ಕಿಲೋ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿದ್ದು, ಸುಮಾರು ಏಳು ಸಾವಿರ ಹೆಕ್ಟೇರ್ ಬೆಂಕಿ ಜ್ವಾಲೆ ಆವರಿಸಿದೆ.

ವುರುಲೂ ಪಟ್ಟಣದ ಬಳಿ ರಾತ್ರಿಯಿಡಿ ಕಾಡ್ಗಿಚ್ಚು ಉಲ್ಬಣಗೊಂಡು ಮುಂಡರಿಂಗ್, ಚಿಟ್ಟರಿಂಗ್, ನಾರ್ಥಮ್ ಹಾಗೂ ಸ್ವಾನ್ ನಗರದ ಮೇಲೂ ಪ್ರಭಾವಬೀರಿದೆ. ಈ ದುರ್ಘಟನೆಯಲ್ಲಿ ಸುಮಾರು 30 ಮನೆಗಳು ಬೆಂಕಿಗೆ ಆಹುತಿಯಾಗಿವೆ. ಆದರೆ, ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಒಬ್ಬ ಅಗ್ನಿಶಾಮಕ ದಳ ವ್ಯಕ್ತಿ ದಟ್ಟಹೊಗೆಯಲ್ಲಿ ಸಿಲುಕಿ ತೊಂದರೆಗೀಡಾಗಿದ್ದಾನೆ.

ಯಾವುದೇ ಸಾವು ನೋವು ವರದಿಯಾಗಿಲ್ಲ ಎಂದು ಸ್ವಾನ್ ಮೇಯರ್ ಕೆವಿನ್ ಬೈಲಿ ತಿಳಿಸಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾದ ಅಗ್ನಿ ಮತ್ತು ತುರ್ತು ಸೇವಾ ವರದಿ ಪ್ರಕಾರ ಮಂಗಳವಾರ 6667 ಹೆಕ್ಟೇರ್‍ಗಳಿಗೆ ಅಗ್ನಿ ವ್ಯಾಪಿಸಿದೆ. ವೂರುಲೂದಿಂದ ಪರ್ತನ ಈಶಾನ್ಯಕ್ಕೆ ವಲ್ಯುಂಗಾ ರಾಷ್ಟ್ರೀಯ ಉದ್ಯಾನವನದವರೆಗೆ ಪಶ್ಚಿಮಕ್ಕೆ 25 ಕಿ.ಮೀ. ವಿಸ್ತೀಣದಲ್ಲಿರುವ ಜನರು ತಮ್ಮ ಮನೆಗಳನ್ನು ತೊರೆಯುವುದು ತುಂಬಾ ಅಪಾಯಕಾರಿ.

ಪ್ರಸ್ತುತ ದಕ್ಷಿಣ ಗೋಲಾರ್ಧದ ಬೇಸಿಗೆಯಲ್ಲಿ ಕಾಡ್ಗಿಚ್ಚು ಸಾಮಾನ್ಯವಾಗಿದೆ. ಆದಾಗ್ಯೂ ಆಸ್ಟ್ರೇಲಿಯಾದ ಆಗ್ನೇಯ ಕರಾವಳಿಯಲ್ಲಿ ಈ ಋತುವಿನಲ್ಲಿ ಯಾವುದೇ ಅಪಾಯವಿಲ್ಲ. ಇದು ಕಳೆದ ಬೇಸಿಗೆಯಲ್ಲಿ ಭಾರಿ ಬೆಂಕಿಯಿಂದ ನಾಶವಾಗಿತ್ತು ಎಂದು ತಿಳಿದುಬಂದಿದೆ.


SHARE THIS

Author:

0 التعليقات: