Friday, 12 February 2021

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್: ಬದಲಾವಣೆಗಳೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ


 ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್: ಬದಲಾವಣೆಗಳೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ

 ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ.

ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಉಭಯ ತಂಡಗಳು ಸರಣಿಯ ಎರಡನೇ ಪಂದ್ಯವಾಡುತ್ತಿದೆ. ಇಂಗ್ಲೆಂಡ್ ತಂಡ ಮೊದಲ ಪಂದ್ಯ ಗೆದ್ದಿದ್ದರೆ, ಟೀಂ ಇಂಡಿಯಾ ಈ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲಗೊಳಿಸಲು ಉತ್ಸುಕವಾಗಿದೆ

ಭಾರತ ತಂಡದಲ್ಲಿ ಒಟ್ಟು ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, ಕುಲದೀಪ್ ಯಾದವ್ ತಂಡಕ್ಕೆ ಮರಳಿದ್ದಾರೆ. ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಮುಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ 4 ಬದಲಾವಣೆ: ಮೊದಲ ಪಂದ್ಯದಲ್ಲಿ 227 ರನ್ ಅಂತರದ‌ ಜಯಭೇರಿ ಬಾರಿಸಿದ ಇಂಗ್ಲೆಂಡ್ ತಂಡ‌ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ 4 ಬದಲಾವಣೆಗಳನ್ನು ಮಾಡಿದೆ. ಜೇಮ್ಸ್‌ ಆ್ಯಂಡರ್ಸನ್‌, ಜೋಫ್ರಾ ಆರ್ಚರ್‌, ಡಾಮಿನಿಕ್‌ ಬೆಸ್‌ ಅವರನ್ನು ಇಂಗ್ಲೆಂಡ್‌ ಕೈಬಿಟ್ಟಿದೆ. ವಿಕೆಟ್‌ ಕೀಪರ್‌ ಜಾಸ್‌ ಬಟ್ಲರ್‌ ತವರಿಗೆ ಮರಳಿದ್ದಾರೆ. ಇವರ ಬದಲು ಸ್ಟುವರ್ಟ್‌ ಬ್ರಾಡ್‌ ಮತ್ತು ಮೊಯಿನ್‌ ಅಲಿ ಅವರನ್ನು ಸೇರಿಸಿಕೊಳ್ಳಲಾಗಿದೆ. ವೇಗಿ ಆರ್ಚರ್‌ ಗಾಯಾಳಾದ ಕಾರಣ ತಂಡದಿಂದ ಬೇರ್ಪಟ್ಟಿದ್ದಾರೆ.

ಭಾರತ ತಂಡ: ರೋಹಿತ್‌ ಶರ್ಮ, ಶುಭಮನ್‌ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಇಶಾಂತ್‌ ಶರ್ಮ, ಮೊಹಮ್ಮದ್ ಸಿರಾಜ್.

ಇಂಗ್ಲೆಂಡ್‌: ಡೊಮಿನಿಕ್‌ ಸಿಬ್ಲಿ, ರೋರಿ ಬರ್ನ್ಸ್, ಡೇನಿಯಲ್‌ ಲಾರೆನ್ಸ್‌, ಜೋ ರೂಟ್‌ (ನಾಯಕ), ಓಲೀ ಪೋಪ್‌, ಸ್ಟೋಕ್ಸ್‌, ಬೆನ್‌ ಫೋಕ್ಸ್‌, ಮೊಯಿನ್‌ ಅಲಿ, ಸ್ಟುವರ್ಟ್‌ ಬ್ರಾಡ್‌, ಕ್ರಿಸ್‌ ವೋಕ್ಸ್‌/ಓಲೀ ಸ್ಟೋನ್‌, ಜಾಕ್‌ ಲೀಚ್


SHARE THIS

Author:

0 التعليقات: