Thursday, 4 February 2021

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,500 ರೂ. ಇಳಿಕೆ


ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,500 ರೂ. ಇಳಿಕೆ

ನವದೆಹಲಿ : ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಜಾಗತಿಕ ಮಟ್ಟದಲ್ಲಿ ದರ ಇಳಿಕೆ ಹಾಗೂ 2021ರ ಬಜೆಟ್ ನಲ್ಲಿ ಆಮದು ಸುಂಕ ಕಡಿತ ದಹಿನ್ನೆಲೆಯಲ್ಲಿ ಚಿನ್ನವು 10 ಗ್ರಾಮ್ ಗೆ ಸುಮಾರು 2500 ರೂಪಾಯಿ ಇಳಿಕೆ ಕಂಡಿದೆ.

ಚಿನ್ನದ ದರ ಶೇ.0.86ರಷ್ಟು ಕುಸಿತ ಕಂಡು 10 ಗ್ರಾಂಗೆ 47,340 ರೂಪಾಯಿಗಳಿಗೆ ಇಳಿಕೆ ಕಂಡು 47,340 ರೂ. ಗೆ ತಲುಪಿದೆ. ಳ್ಳಿ ಬೆಲೆ ಯೂ ಸಹ 6,500 ರೂಪಾಯಿಗಳಿಗೆ ಕುಸಿದಿದ್ದು, ಪ್ರತಿ ಕಿಲೋಗ್ರಾಂಗೆ 67,840 ರೂಪಾಯಿಗಳಿಗೆ ಇಳಿದಿದೆ.

ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಆಮದು ಸುಂಕವನ್ನು ಶೇ. 12.5 ಇದರಿಂದ ಶೇ. 7.5 ರಷ್ಟು ಕಡಿತಗೊಳಿಸಿದೆ. ಇದಾದ ನಂತರ ಚಿನ್ನದ ದರ ಭಾರೀ ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ ಆಭರಣ ಚಿನ್ನದ ದರ 10 ಗ್ರಾಂಗೆ 44,350 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 48,380 ರೂ. ಇದೆ.SHARE THIS

Author:

0 التعليقات: