Friday, 12 February 2021

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ, ಮೇ 24ರಿಂದ ಜೂ 16ರವರೆಗೆ ಪರೀಕ್ಷೆ


ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ, ಮೇ 24ರಿಂದ ಜೂ 16ರವರೆಗೆ ಪರೀಕ್ಷೆ


ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ಮೇ 24ರಿಂದ ಜೂ. 16ರವರೆಗೆ ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಶುಕ್ರವಾರ ತಿಳಿಸಿದ್ದಾರೆ.


ಇಂದು ಅಧಿಕೃತ ವೇಳಾಪಟ್ಟಿ ಪ್ರಕಟಿಸಿದ ಅವರು, ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಗಳಿಗೆ ಬಂದಿರುವ ಆಕ್ಷೇಪಣೆಗಳು, ನೀಟ್, ಜೆಇಇಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದರು.


ಪ್ರಸ್ತುತ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಲು ಅವಧಿ ಮುಗಿದ ತಕ್ಷಣವೇ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.


ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ

24-05-2021- ಇತಿಹಾಸ

25-05-2021-ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ

26-05-2021 ಭೂಗೋಳ ಶಾಸ್ತ್ರ

27-05-2021 ಮನಃಶಾಸ್ತ್ರ/ ಮೂಲಗಣಿತ

28-05-2021 ತರ್ಕಶಾಸ್ತ್ರ

29-05-2021 ಹಿಂದಿ

31-05-2021 ಇಂಗ್ಲಿಷ್,

01-06-2021 ಮಾಹಿತಿ ತಂತ್ರಜ್ಞಾನ/ಹೆಲ್ತ್‌ಕೇರ್/ವೆಲ್‍ನೆಸ್‍ಬ್ಯೂಟಿ,

02-06-2021 ರಾಜ್ಯಶಾಸ್ತ್ರ/ಗಣಕ ವಿಜ್ಞಾನ,

03-06-2021 ಜೀವವಿಜ್ಞಾನ/ಎಲೆಕ್ಟ್ರಾನಿಕ್ಸ್

04-06-2021 ಅರ್ಥಶಾಸ್ತ್ರ

05-06-2021 ಗೃಹ ವಿಜ್ಞಾನ

07-06-2021 ವ್ಯವಹಾರ ಅಧ್ಯಯನ/ ಭೌತವಿಜ್ಞಾನ

08-06-2021 ಐಚ್ಛಿಕ ಕನ್ನಡ

09-06-2021, ತಮಿಳು/ತೆಲುಗು/ಮಲಯಾಳಂ/ಮರಾಠಿ/ಅರೆಬಿಕ್/ಫ್ರೆಂಚ್,

10-06-2021 ಸಮಾಜ ಶಾಸ್ತ್ರ/ ರಸಾಯನವಿಜ್ಞಾನ

11-06-2021 ಉರ್ದು/ ಸಂಸ್ಕೃತ

12-06-2021 ಸಂಖ್ಯಾಶಾಸ್ತ್ರ

14-06-2021 ಲೆಕ್ಕಶಾಸ್ತ್ರ/ ಗಣಿತ/ಶಿಕ್ಷಣ

15-06-2021 ಭೂಗರ್ಭಶಾಸ್ತ್ರ

16-06-2021 ಕನ್ನಡ ಪರೀಕ್ಷೆ



SHARE THIS

Author:

0 التعليقات: