Saturday, 6 February 2021

ನ್ಯಾಯ ಸಿಗದಿದ್ದರೆ ಅ.2ರ ವರೆಗೂ ರೈತರ ಪ್ರತಿಭಟನೆ ನಿಲ್ಲುವುದಿಲ್ಲ : ರಾಕೇಶ್ ಟಿಕಾಯತ್


ನ್ಯಾಯ ಸಿಗದಿದ್ದರೆ ಅ.2ರ ವರೆಗೂ ರೈತರ ಪ್ರತಿಭಟನೆ ನಿಲ್ಲುವುದಿಲ್ಲ : ರಾಕೇಶ್ ಟಿಕಾಯತ್

ನವದೆಹಲಿ : ನ್ಯಾಯ ಸಿಗದಿದ್ದರೆ ದೆಹಲಿ ಗಡಿಭಾಗಗಳಲ್ಲಿ ರೈತರು ನಡೆಸುವ ಪ್ರತಿಭಟನೆ ಅ.2ರ ವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಸಂಘದ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ರಸ್ತೆ ತಡೆ ಪ್ರತಿಭಟನೆಯನ್ನು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿಸುವ ಸಂಚು ನಡೆದಿರುವ ಹಿನ್ನೆಲೆಯಲ್ಲಿ ಅಲ್ಲಿನ ರಸ್ತೆ ತಡೆ ಪ್ರತಿಭಟನೆ ಕೈಬಿಟ್ಟಿರುವ ಬಗ್ಗೆ ಮಾಹಿತಿ ನೀಡಿ ಅವರು ಈ ವಿಷಯ ತಿಳಿಸಿದರು.

ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ರೈತರ ರಸ್ತೆ ತಡೆ ಪ್ರತಿಭಟನೆಯಿರುವುದಿಲ್ಲ. ಆದರೆ, ಈ ಪ್ರದೇಶದ ರೈತರನ್ನು ಯಾವಾಗ ಬೇಕಾದರೂ ದೆಹಲಿಗೆ ಬರುವಂತೆ ಕರೆಕೊಡಬಹುದು, ಅದಕ್ಕೆ ಸಿದ್ಧರಾಗಿರುವಂತೆ ಅವರು ಮನವಿ ಮಾಡಿದರು.SHARE THIS

Author:

0 التعليقات: