Friday, 19 February 2021

2 ವರ್ಷದಲ್ಲಿ ಮತ್ತೆ ಅಧಿಕಾರಕ್ಕೆ ಬರ್ತೀವಿ, ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡ್ತೀನಿ: ಸಿದ್ದರಾಮಯ್ಯ


2 ವರ್ಷದಲ್ಲಿ ಮತ್ತೆ ಅಧಿಕಾರಕ್ಕೆ ಬರ್ತೀವಿ, ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡ್ತೀನಿ: ಸಿದ್ದರಾಮಯ್ಯ

ಬೆಂಗಳೂರು: 2 ವರ್ಷದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರ್ತೀವಿ. ಬಡವರಿಗೆ 10 ಕೆ.ಜಿ ಅಕ್ಕಿ ಕೊಡ್ತೀನಿ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತ ಪಡಿಸಿದ್ದು, 'ನಾನು ಅಧಿಕಾರದಲ್ಲಿ ಇದ್ದಾಗ ಪ್ರತಿಯೊಬ್ಬರಿಗೆ ಫ್ರೀಯಾಗಿ 7 ಕೆಜಿ ಅಕ್ಕಿ ಕೊಡ್ತಿದ್ದೆ. ಈಗ 5 ಕೆಜಿ ಮಾಡಿದ್ದಾರೆ, 3 ಕೆಜಿ ಮಾಡ್ತಾರಂತೆ ಈಗ. ಬಡವರ ಹೊಟ್ಟೆ ಮೇಲೆ ಹೊಡೆಯುವ ಇವ್ರನ್ನ ಸಹಿಸಿಕೊಳ್ಳೊಕೆ ಆಗುತ್ತಾ? ಅದಕ್ಕೆ ಇನ್ನೆರೆಡು ವರ್ಷದಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರ್ತಿವಿ. ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೋಡ್ತಿವಿ. ಎಷ್ಟು ದುಡ್ಡು ಬೇಕಾದ್ರು ಖರ್ಚಾಗಲಿ. ಇದ್ರಲ್ಲಿ ಯಾವುದೇ ಅನುಮಾನ ಇಲ್ಲ. 100 ಪರ್ಸೆಂಟ್‌ ವಿ ವಿಲ್‌ ಕಮ್‌ ಬ್ಯಾಕ್‌' ಎಂದರು.SHARE THIS

Author:

0 التعليقات: