Tuesday, 16 February 2021

ದೆಹಲಿ ರೈತರ ಕರೆ ಬೆಂಬಲಿಸಿ ಫೆ.18 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ


 ದೆಹಲಿ ರೈತರ ಕರೆ ಬೆಂಬಲಿಸಿ ಫೆ.18 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೇಶಾದ್ಯಂತ ರೈಲು ತಡೆಗೆ ಕರೆ ನೀಡಿದ್ದು, ಈ ಕರೆಗೆ ಓಗೊಟ್ಟು ರಾಜ್ಯ ರೈತ ಸಂಘಟನೆಗಳು ರಾಜ್ಯದಾದ್ಯಂತ ರೈಲು ತಡೆ ಚಳವಳಿ ನಡೆಸಲಿದ್ದಾರೆಂದು ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ದೆಹಲಿ ರೈತ ಚಳುವಳಿ ಬಗ್ಗೆ ಕೇಂದ್ರ ಸರ್ಕಾರ ರೈತ ಚಳುವಳಿಯ ಹತ್ತಿಕ್ಕುವ ಪ್ರಯತ್ನಕೆ ಹೆಚ್ಚು ಒತ್ತು ನೀಡುತ್ತಿದೆ, ನಾಟಕೀಯವಾಗಿ ವರ್ತಿಸುತ್ತಿದೆ ಇದನ್ನು ಖಂಡಿಸಿ ದೇಶಾದ್ಯಂತ ಫೆಬ್ರವರಿ 18 ರಂದು ಮಧ್ಯಾಹ್ನ 12 ಗಂಟೆಯಿಂದ ಮೂರು ಗಂಟೆ ವರೆಗೆ ರೈಲು ತಡೆ ಚಳವಳಿ ನಡೆಸಲು ಕರೆ ನೀಡಿರುವುದನ್ನು ಬೆಂಬಲಿಸಿ ಕರ್ನಾಟಕದಲ್ಲಿಯೂ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ಚಳವಳಿ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿ ಮಾಡಿದಂತೆ ಕಾಣುತ್ತಿದೆ, ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶ ರಂಜನ್ ಗೊಗಾಯ್ ʼಬಡಜನರಿಗೆ ದುಡಿಯುವ ವರ್ಗಕ್ಕೆ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದು ಕಷ್ಟಕರವಾಗಿದೆʼ ಎನ್ನುತ್ತಾರೆ. ಪ್ರಜಾಪ್ರಭುತ್ವ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಾಗುತ್ತಿದೆ, ಬಂಡವಾಳಶಾಹಿಗಳ ಶ್ರೀಮಂತರ ವಶಕ್ಕೆ ಸಿಲುಕುತ್ತಿದೆ, ಇಂಥ ವಿಚಾರಗಳ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕಾಗಿದೆ. ಕೇಂದ್ರ ಸರ್ಕಾರ ಎಮ್ಮೆ ಚರ್ಮದ ಸರ್ಕಾರ. ಮಳೆ ಚಳಿ ಗಾಳಿ ಬಿಸಿಲು ಯಾವುದಕ್ಕೂ ಪ್ರತಿಕ್ರಿಯೆ ಇಲ್ಲ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ರೈತ ಉತ್ಪನ್ನಗಳಿಗೆ ಕನಿಷ್ಠ ಶಾಸನಬದ್ಧಬೆಲೆ ಖಾತ್ರಿಗೊಳಿಸಿದ ಸರ್ಕಾರ. ಕೃಷಿ ಉತ್ಪನ್ನ ಖರೀದಿಸಲು ಯಾವುದೇ ನಿಯಂತ್ರಣವಿಲ್ಲದ, ರಹದಾರಿ ಇಲ್ಲದವರು, ಎಷ್ಟು ಬೇಕಾದರೂ ಎಲ್ಲಿ ಬೇಕಾದರೂ ಖರೀದಿಸಬಹುದು ಎನ್ನುವ ವ್ಯಾಪಾರಕ್ಕೆ ಕಾನೂನು ಮೂಲಕ ಖಾಸಗಿಯವರಿಗೆ ಅವಕಾಶ ಕೊಡಲಾಗಿದೆ,ಯಾವುದೇ ಅನುಮತಿ ಇಲ್ಲದವರು ವ್ಯಾಪಾರ ಮಾಡುವಾಗ ರೈತರಿಗೆ ವಂಚನೆ ಮಾಡಿದ್ದಾಗ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ನ್ಯಾಯಾಲಯಕ್ಕೆ ಹೋಗುವುದನ್ನು ಕಿತ್ತು ಹಾಕಲಾಗಿದೆ,ಇದೆಲ್ಲಾ ಜನಪ್ರತಿನಿಧಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ, ರಾಜ್ಯ ಸರ್ಕಾರ ಮಂಡಿಸುವ ಮುಂದಿನ ಬಜೆಟ್ನಲ್ಲಿ ಕಬ್ಬಿನ ಎಫ್ ಆರ್ ಪಿ ಬೆಲೆಯನ್ನು ರೈತರ ಹೊಲದಲ್ಲಿನ ದರ ಎಂದು ರಾಜ್ಯಸರ್ಕಾರವೇ ನಿಗದಿ ಮಾಡುವಂತಾಗಬೇಕು. ಕಬ್ಬಿಗೆ ಫಸಲ್ ಭೀಮಾ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕು. ಹಣ್ಣು-ತರಕಾರಿ ಎಲ್ಲ ಬೆಳೆಗಳಿಗೆ ಶಾಸನಬದ್ಧ ಖಾತ್ರಿ ಕನಿಷ್ಠ ಬೆಂಬಲ ಬೆಲೆ ನಿಗದಿಮಾಡುವ ಮಾನದಂಡ ಜಾರಿಗೆ ಬರಬೇಕು. ಕೇರಳ ರಾಜ್ಯದ ಮಾದರಿಯಲ್ಲಿ ರಾಜ್ಯದಲ್ಲಿ, ಆರು ತಿಂಗಳಿಗೊಮ್ಮೆ ಸಕ್ಕರೆ ಸಚಿವರು, ಸಕ್ಕರೆ ಅಭಿವೃದ್ಧಿ ಆಯುಕ್ತರು ಬದಲಾಗುತ್ತಿರುವುದು ಕಬ್ಬು ಬೆಳೆಗಾರರ ಸಮಸ್ಯೆಗಳು ಏರಿಕೆಯಾಗಲು ಹಾಗೂ ಪರಿಹಾರ ಸಿಗಲು ಕಷ್ಟವಾಗುತ್ತಿದೆ,ಕಬ್ಬು ಬೆಳೆಗಾರರಿಗೆ 4000 ಕೋಟಿ ಕಬ್ಬಿನ ಹಣ ಬಾಕಿ ಬರಬೇಕಾಗಿದೆ ಇದನ್ನು ಕೊಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.


SHARE THIS

Author:

0 التعليقات: