Thursday, 11 February 2021

ವಾಹನ ಸವಾರರ ಗಮನಕ್ಕೆ : ದೇಶಾದ್ಯಂತ ಫೆ. 15 ರಿಂದ ಎಲ್ಲಾ ವಾಹನಗಳಿಗೆ `FASTAG' ಕಡ್ಡಾಯ


ವಾಹನ ಸವಾರರ ಗಮನಕ್ಕೆ : ದೇಶಾದ್ಯಂತ ಫೆ. 15 ರಿಂದ ಎಲ್ಲಾ ವಾಹನಗಳಿಗೆ `FASTAG' ಕಡ್ಡಾಯ

ನವದೆಹಲಿ : ಫೆಬ್ರವರಿ 15 ರಿಂದಲೇ ದೇಶಾದ್ಯಂತ ಫಾಸ್ಟ್ಯಾಗ್ ಜಾರಿಗೆ ಬರಲಿದ್ದು. ಕೊರೊನಾ ಮತ್ತು ನಾನಾ ಕಾರಣಗಳಿಂದ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ವ್ಯವಸ್ಥೆ ಜಾರಿ ದಿನಾಂಕವನ್ನು ಯಾವುದೇ ಕಾರಣಕ್ಕೂ ಮುಂದೂಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಫೆಬ್ರವರಿ 15 ರಿಂದ ಟೋಲ್ ಗೇಟ್ ಗಳಲ್ಲಿ ಸಂಪೂರ್ಣವಾಗಿ ಫಾಸ್ಟ್ ಟ್ಯಾಗ್ ಪಾವತಿ ಕಡ್ಡಾಯ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಈ ಹಿಂದಿನಿಂದಲೂ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ ಎಂದು ಹೇಳುತ್ತಲೇ ಬಂದಿದ್ದೇವೆ ಆದರೆ ಇನ್ನು ಮುಂದೆ ದಿನಾಂಕವನ್ನು ಮುಂದೂಡಲು ಸಾಧ್ಯವಿಲ್ಲ. 2021ರ ಫೆಬ್ರವರಿ 15ರಿಂದ ದೇಶದ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಬಳಕೆ ಕಡ್ಡಾಯವಾಗಿರಬೇಕು ಎಂದು ಕೇಂದ್ರ ಸಚಿವನಿತೀನ್ ಗಡ್ಕರಿ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಹದ್ದಾರಿ ಪ್ರಾಧಿಕಾರದ ಪ್ರಕಾರ, ಪ್ರಸ್ತುತ ದೇಶಾದ್ಯಂತ ಒಟ್ಟು ಶೇ. 75 ರಿಂದ 80 ರಷ್ಟು ಫಾಸ್ಟ್ಯಾಗ್ ಮೂಲಕ ಪಾವತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 15 ರಿಂದ ಸಂಪೂರ್ಣವಾಗಿ ಟೋಲ್ ಗೇಟ್ ಗಳಲ್ಲಿ ನಗದು ರಹಿತವಾಗುವ ಮೂಲಕ ಶೇ. 100 ರಷ್ಟು ಫಾಸ್ಟ್ಯಾಗ್ ಮೂಲಕ ಪಾವತಿಯಾಗುವಂತೆಯಾಗಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.SHARE THIS

Author:

0 التعليقات: