Sunday, 7 February 2021

ಉತ್ತರಾಖಂಡದಲ್ಲಿ ಹಿಮ ಪ್ರವಾಹ: 15 ಜನರ ರಕ್ಷಣೆ, 14 ಮಂದಿ ಮೃತ್ಯು


 ಉತ್ತರಾಖಂಡದಲ್ಲಿ ಹಿಮ ಪ್ರವಾಹ: 15 ಜನರ ರಕ್ಷಣೆ, 14 ಮಂದಿ ಮೃತ್ಯು

ಚಮೋಲಿ(ಉತ್ತರಾಖಂಡ): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿರುವ ಹಿಮ ಪ್ರವಾಹದಲ್ಲಿ ವಿವಿಧ ಸ್ಥಳಗಳಿಂದ ಈ ತನಕ ಸುಮಾರು 15 ಜನರನ್ನು ರಕ್ಷಿಸಲಾಗಿದ್ದು, 14 ಮೃತದೇಹಗಳು ಪತ್ತೆಯಾಗಿದೆ  ಎಂದು ಚಮೋಲಿ ಪೊಲೀಸರು ಸೋಮವಾರ ಹೇಳಿದ್ದಾರೆ.

“ಸುರಂಗದಲ್ಲಿ ಸಿಲುಕಿರುವವರಿಗೆ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದೆ. ಜೆಸಿಬಿಯ ಸಹಾಯದಿಂದ ಸುರಂಗದೊಳಗೆ ತಲುಪುವ ಮೂಲಕ ದಾರಿ ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿಯವರೆಗೆ 15 ಜನರನ್ನು ರಕ್ಷಿಸಲಾಗಿದೆ ಎಂದು ಚಮೋಲಿ ಪೊಲೀಸ್ ತಿಳಿಸಿದೆ.

ಇದೇ ವೇಳೆ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸೋಮವಾರ ಚಮೋಲಿ ಜಿಲ್ಲೆಯಲ್ಲಿ ತಪೋವನ್ ಸೇತುವೆ ಬಳಿ ಅವಶೇಷಗಳನ್ನು ತೆರವುಗೊಳಿಸಿದೆ.


SHARE THIS

Author:

0 التعليقات: