ಹಿಮ ಪ್ರವಾಹ ದುರಂತ : ನಾಪತ್ತೆಯಾದ 136 ಮಂದಿ ಸಾವನ್ನಪ್ಪಿದ್ದಾರೆಂದು ಭಾವಿಸಲಾಗಿದೆ : ಉತ್ತರಾಖಂಡ್ ಸರ್ಕಾರ
ಚಮೋಲಿ: ಉತ್ತರಾಖಂಡದ ಚಮೋಲಿಯಲ್ಲಿ ಹಿಮಸ್ಫೋಟಿಸಿ ಉಂಟಾದ ಪ್ರವಾಹ ದುರಂತ ದಲ್ಲಿ ಇನ್ನೂ 136 ಮಂದಿ ನಾಪತ್ತೆಯಾಗಿದ್ದಾರೆ. ಅವರನ್ನು ರಕ್ಷಿಸುವ ಸಲುವಾಗಿ ಎಲ್ಲಾ ರೀತಿಯ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ನಾಪತ್ತೆಯಾದವರ ಸುಳಿವು ಸಿಕ್ಕಿಲ್ಲ ಎಂದು ಉತ್ತರಾಖಂಡ್ ಸರ್ಕಾರ ಹೇಳಿದೆ.
ದುರಂತದಲ್ಲಿ ನಾಪತ್ತೆಯಾದವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಉತ್ತರಾಖಂಡ್ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಚಮೋಲಿ ದುರಂತದಲ್ಲಿ ನಾಪತ್ತೆಯಾದವರ ಕುಟುಂಬಕ್ಕೆ ಅವರ ಪ್ರಮಾಣ ಪತ್ರವನ್ನು ನೀಡಲು ಸರ್ಕಾರ ಪ್ರಾರಂಭಿಸಿದೆ. ನಾಪತ್ತೆಯಾದವರು, ಸಂಪರ್ಕಕ್ಕೆ ಸಿಗದವರೆಲ್ಲಾ ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದೆ. ಇಲ್ಲಿವರೆಗೆ 68 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಉತ್ತರಾಖಂಡ್ ಸರ್ಕಾರ ಮಾಹಿತಿ ನೀಡಿದೆ.
0 التعليقات: