Friday, 26 February 2021

ಮತ್ತೆ ಬೆಂಗಳೂರಿನ ಸಂಭ್ರಮ್ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳಿಗೆ ಕೊರೋನಾ, 10 ಕ್ಕೇರಿದ ಸೋಂಕಿತರ ಸಂಖ್ಯೆ

 

ಮತ್ತೆ ಬೆಂಗಳೂರಿನ ಸಂಭ್ರಮ್ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳಿಗೆ ಕೊರೋನಾ, 10 ಕ್ಕೇರಿದ ಸೋಂಕಿತರ ಸಂಖ್ಯೆ

ಬೆಂಗಳೂರು:ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾದೆಡೆ ಜನರ ದಿವ್ಯ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗುತ್ತಿದೆ.

ಬೆಂಗಳೂರಿನ ಸಂಭ್ರಮ್ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದ್ದು ಕಾಲೇಜಿನಲ್ಲೇ ಒಟ್ಟು ಸೋಂಕಿತರ ಸಂಖ್ಯೆ 10 ಕ್ಕೇರಿದೆ.ಈ ಹತ್ತೂ ವಿದ್ಯಾರ್ಥಿಗಳ ಮೂಲ ಕೇರಳವಾಗಿದೆ. ಈ ಮೊದಲು ಸೋಂಕು ತಗುಲಿದ್ದ ಆರೂ ಮಂದಿಯ ಸಂಪರ್ಕಕ್ಕೆ ಬಂದಿದ್ದ ಸುಮಾರು 85 ಮಂದಿಗೆ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಈಗ ನಾಲ್ವರು ಎಂಬಿಎ ವಿದ್ಯಾರ್ಥಿಗಳಿಗೆ ಸೊಂಕು ತಗುಲಿದೆ.

ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದನ್ನು ನೋಡಿದರೆ ಕೊರೊನಾದ ಎರಡನೇ ಅಲೆ ಕರ್ನಾಟಕದಲ್ಲೂ ಶುರುವಾಗಿದೆಯಾ ಎಂಬ ಆತಂಕ ಎದುರಾಗಿದೆ.


SHARE THIS

Author:

0 التعليقات: