Saturday, 27 February 2021

ನೀವು ಪೆಟ್ರೋಲ್ ಗೆ 100 ಮಾಡಿದ್ರೆ ನಾವು ಹಾಲಿಗೂ 100ರೂ. ಮಾಡುತ್ತೇವೆ : ರೈತರ ಸವಾಲು


ನೀವು ಪೆಟ್ರೋಲ್ ಗೆ 100 ಮಾಡಿದ್ರೆ ನಾವು ಹಾಲಿಗೂ 100ರೂ. ಮಾಡುತ್ತೇವೆ : ರೈತರ ಸವಾಲು

ಹೊಸದಿಲ್ಲಿ : ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವನ್ನು ಪ್ರತಿಭಟಿಸಿ ಮಾರ್ಚ್ 1 ರಿಂದ ಹಾಲಿಗೆ ಒಂದು ಲೀಟರ್ ಗೆ ನೂರು ರುಪಾಯಿ ಮಾಡಬೇಕೆಂದು ರೈತರು ಹೇಳಿದ್ದಾರೆ. ಪೆಟ್ರೋಲ್ ಬೆಲೆ ಎಲ್ಲಾ ರಾಜ್ಯಗಳಲ್ಲಿ 100 ರುಪಾಯಿ ದಾಟಿದ ನಂತರ ಸಂಯುಕ್ತ ಕಿಸಾನ್ ಮೋರ್ಚಾ ಈ ತೀರ್ಮಾನಕ್ಕೆ ಬಂದಿದೆ.

ಪೆಟ್ರೋಲ್, ಡೀಸೆಲ್, ಸಾಗಾಟ ವೆಚ್ಚ, ಜಾನುವಾರುಗಳ ಮೇವು, ಇನ್ನಿತರ ಖರ್ಚುಗಳು ಹೆಚ್ಚುವುದು ಇದೆಲ್ಲಾ ಹಾಲು ಉತ್ಪಾದನೆಗೆ ಪರಿಣಾಮ ಬೀರಿರುವದರಿಂದ ಹಾಲಿನ ದರವನ್ನು ನೂರು ರುಪಾಯಿ ಮಾಡುವುದು ಅಗತ್ಯವಾಗಿದೆ ಎಂದು ಕಿಸಾನ್ ಮೋರ್ಚಾ ಹೇಳಿದೆ.

ಈಗ ಲೀಟರ್ ಗೆ 50 ರುಪಾಯಿಗೆ  ಹಾಲು ಮಾರಲಾಗುತ್ತದೆ. ಇದನ್ನು ಮಾರ್ಚ್ ಒಂದರಿಂದ ದುಪ್ಪಟ್ಟು ಮಾಡಬೇಕು. ರೈತರು ಇದಕ್ಕೆ ಸಂಬಂಧಿಸಿದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಜಿಲ್ಲಾ ಮುಖ್ಯಸ್ಥ ಮಲ್ಕಿತ್ ಸಿಂಗ್ ಹೇಳಿದ್ದಾರೆ. ರೈತರ ತೀರ್ಮಾನವನ್ನು ವಿರೋಧಿಸುವುದು ಕೇಂದ್ರ ಸರಕಾರದ ನಿರ್ಧಾರವಾದರೆ ಮುಂಬರುವ ದಿನಗಳಲ್ಲಿ ತರಕಾರಿಯ ಬೆಲೆಯನ್ನು ಹೆಚ್ಚಿಸಿ ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.SHARE THIS

Author:

0 التعليقات: