Sunday, 7 February 2021

ಹಿಮ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆ; ಮೃತರ ಕುಟುಂಬಕ್ಕೆ ತಲಾ ಆರು ಲಕ್ಷ ರೂ. ಪರಿಹಾರ


ಹಿಮ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆ; ಮೃತರ ಕುಟುಂಬಕ್ಕೆ ತಲಾ ಆರು ಲಕ್ಷ ರೂ. ಪರಿಹಾರ


ಚಮೋಲಿ (ಉತ್ತರಾಖಂಡ): ಇಲ್ಲಿನ ತಪೋವನ ಏರಿಯಾದಲ್ಲಿ ಹಿಮಪರ್ವತ ಕುಸಿದು ಡ್ಯಾಂ ಒಡೆದ ಪರಿಣಾಮ ಉಂಟಾದ ಅನಾಹುತಕ್ಕೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮೃತರ ಕುಟುಂಬಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟು ಆರು ಲಕ್ಷ ರೂಪಾಯಿ ಪರಿಹಾರ ಘೋಷಿಸಿವೆ.

ಮೃತಪಟ್ಟ ಪ್ರತಿ ವ್ಯಕ್ತಿಯ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಘೋಷಿಸಿದ್ದಾರೆ. ಅದರ ಜತೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಅವಘಡದಲ್ಲಿ ಸುಮಾರು 160ಕ್ಕೂ ಹೆಚ್ಚು ಜನರು ಜಲಸಮಾಧಿಯಾಗಿರುವ ಶಂಕೆಯಿದೆ. ದೌಲಿ ಗಂಗಾ ನದಿಯ ಸುತ್ತಮುತ್ತಲ ಪ್ರದೇಶದಲ್ಲಿ ಈಗಾಗಲೇ 10 ಶವಗಳು ಸಿಕ್ಕಿವೆ. ಚಮೇಲಿ ಜಿಲ್ಲೆಯ ತಪೋವನ ಪ್ರದೇಶದಲ್ಲಿರುವ ಸುರಂಗದಲ್ಲಿ ಸಿಲುಕಿದ್ದ 17 ಕಾರ್ಮಿಕರನ್ನು ಇಂಡೋ-ಟಿಬೆಟಿಯನ್ ಪೊಲೀಸರು ರಕ್ಷಿಸಿದ್ದಾರೆ. SHARE THIS

Author:

0 التعليقات: