Saturday, 9 January 2021

LAC ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ: ಚೀನಾ ಸೈನಿಕನಿಂದ ಅತಿಕ್ರಮಣ ಪ್ರವೇಶ..!


 LAC ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ: ಚೀನಾ ಸೈನಿಕನಿಂದ ಅತಿಕ್ರಮಣ ಪ್ರವೇಶ..!

ಲಡಾಕ್:‌ ಭಾರತ ಮತ್ತು ಚೀನಾಗಳ ನಡುವಿನ ಗಡಿ ವಿವಾದದ ಕೇಂದ್ರ ಬಿಂದುವಾಗಿದ್ದು, ಎಲ್‌ʼಒಸಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ ಎ)ಯ ಯೋಧನೊಬ್ಬ ಲಡಾಕ್ʼನ ಗಡಿ ನಿಯಂತ್ರಣ ರೇಖೆಯ (ಎಲ್ ಎಸಿ) ಗಡಿ ದಾಟಿ ಬಂದಿದ್ದು, ಶುಕ್ರವಾರ ಪಾಂಗಾಂಗ್ ತ್ಸೊದ ದಕ್ಷಿಣ ದಂಡೆಯಲ್ಲಿ ಸೆರೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕಳೆದ ವರ್ಷ ಅಕ್ಟೋಬರ್ ನಂತರ ಇಂತಹ ಘಟನೆ ಎರಡನೇ ಬಾರಿ ವರದಿಯಾಗಿದೆ.


SHARE THIS

Author:

0 التعليقات: