Saturday, 9 January 2021

'KSRTC ಬಸ್ ಪ್ರಯಾಣಿಕ'ರಿಗೆ ಸಿಹಿಸುದ್ದಿ : ವಾರಾಂತ್ಯದ 'ಶೇ.10ರಷ್ಟು ಹೆಚ್ಚುವರಿ ಪ್ರಯಾಣದರ' ವಾಪಾಸ್


 'KSRTC ಬಸ್ ಪ್ರಯಾಣಿಕ'ರಿಗೆ ಸಿಹಿಸುದ್ದಿ : ವಾರಾಂತ್ಯದ 'ಶೇ.10ರಷ್ಟು ಹೆಚ್ಚುವರಿ ಪ್ರಯಾಣದರ' ವಾಪಾಸ್

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ವಿಧಿಸುತ್ತಿದ್ದಂತ ಶೇ.10ರಷ್ಟು ಹೆಚ್ಚುವರಿ ಪ್ರಯಾಣದರವನ್ನು ಇಳಿಕೆ ಮಾಡಿದೆ. ಈ ಆದೇಶ ವಾಪಾಸ್ ಪಡೆದಿದ್ದು, ಇದರಿಂದಾಗಿ ವಾರಾಂತ್ಯ ದಿನಗಳಾದಂತ ಶುಕ್ರವಾರ ಹಾಗೂ ಭಾನುವಾರಂದು ತೆಳರುತ್ತಿದ್ದಾಗ ಶೇ.10ರಷ್ಟು ಹೆಚ್ಚುವರಿ ಟಿಕೆಟ್ ದರದ ಹೊರೆ ಕಡಿಮೆ ಆದಂತೆ ಆಗಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಂತೆ ಆಗಿದೆ.

ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ನಿಗಮದ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಡ್ರೀಮ್ ಕ್ಲಾಸ್, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಾದ ಶುಕ್ರವಾರ ಹಾಗೂ ಭಾನುವಾರಗಳಂದು ಆಕರಿಸುತ್ತಿದ್ದ ಶೇ.10ರಷ್ಟು ಹೆಚ್ಚುವರಿ(ಮೂಲ ದರ) ಪ್ರಯಾಣದರವನ್ನು ದಿನಾಂಕ 15-01-2021ರಿಂದ 31-03-2021ರ ಅವಧಿಗೆ ಹಿಂಪಡೆಯಲಾಗಿದೆ ಎಂದು ತಿಳಿಸಿದೆ.

ಹೀಗಾಗಿ ವಾರದ ಎಲ್ಲಾ ದಿನಗಳಂದು ಏಕರೂಪದ ಪ್ರಯಾಣದರ ನಿಗದಿಪಡಿಸಲಾಗಿದೆ. ಸಾರ್ವಜನಿಕರ ಪ್ರಯಾಣಿಕರು ಇದರ ಸದುಪಯೋಗ ಪಡೆಯುವಂತೆ ಕೆ ಎಸ್ ಆರ್ ಟಿ ಸಿ ಕೋರಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಬಸ್ ನ ವಾರಾಂತ್ಯ ಹೆಚ್ಚುವರಿ ಶೇ.10ರಷ್ಟು ಮೂಲ ದರದ ಟಿಕೆಟ್ ದರ ಕಡಿಮೆಗೊಂಡು, ಭರ್ಜರಿ ಸಿಹಿಸುದ್ದಿ ಸಿಕ್ಕಂತೆ ಆಗಿದೆ.


SHARE THIS

Author:

0 التعليقات: