Tuesday, 5 January 2021

ಬೇನಾಮಿ ಆಸ್ತಿ ಪ್ರಕರಣ ; ರಾಬರ್ಟ್ ವಾದ್ರಾಗೆ 'IT' ಶಾಕ್ ; ಇಂದು ಮತ್ತೆ ಅಧಿಕಾರಿಗಳಿಂದ ವಿಚಾರಣೆ
ಬೇನಾಮಿ ಆಸ್ತಿ ಪ್ರಕರಣ ; ರಾಬರ್ಟ್ ವಾದ್ರಾಗೆ 'IT' ಶಾಕ್ ; ಇಂದು ಮತ್ತೆ ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಕೂಡ ರಾಬರ್ಟ್ ವಾದ್ರಾ ನಿವಾಸಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ವಾದ್ರಾ ನಿವಾಸಕ್ಕೆ ಭೇಟಿ ನೀಡಿದ ಐಟಿ ಅಧಿಕಾರಿಗಳು ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಪಡೆದುಕೊಂಡಿದ್ದಾರೆ.

ನಿನ್ನೆ ಕೂಡ ಐಟಿ ಅಧಿಕಾರಿಗಳು ರಾಬರ್ಟ್ ವಾದ್ರಾ ಬಳಿ ಪ್ರಕರಣ ಸಂಬಂಧ ಹೇಳಿಕೆ ಪಡೆದುಕೊಂಡಿದ್ದರು.ವಿಚಾರಣೆ ಬಳಿಕ ಪ್ರತಿಕ್ರಿಯೆ ನೀಡಿದ ವಾದ್ರಾ ನಾನು ಮುಕ್ತವಾಗಿ ವಿಚಾರಣೆಗೆ ಹಾಜರಾಗಿದ್ದೇನೆ, ಮುಂದೇನಾಗುತ್ತೋ ಕಾದು ನೋಡೋಣ ಎಂದು ಹೇಳಿಕೆ ನೀಡಿದ್ದಾರೆ.


SHARE THIS

Author:

0 التعليقات: