'ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗುವುದು ರಾಮನಗರದಲ್ಲೇ' : ಭಾವುಕರಾಗಿ ನುಡಿದ 'HDK'
ರಾಮನಗರ : ರಾಮನಗರ ಜಿಲ್ಲೆಯನ್ನು ಬಿಟ್ಟು ನಾನು ಹೊರಗೆ ಹೋಗಲ್ಲ, ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗುವುದು ರಾಮನಗರದಲ್ಲೇ, ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು ವಿಪಕ್ಷಗಳ ಟೀಕೆಗೆ ಉತ್ತರ ನೀಡಿದ್ದಾರೆ. ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗುವುದು ರಾಮನಗರದಲ್ಲೇ, ನಾನು ಎಂದಿಗೂ ಕೂಡ ಚನ್ನಪಟ್ಟಣ ಕ್ಷೇತ್ರ ಬಿಡುವುದಿಲ್ಲ, ಕ್ಷೇತ್ರ ಬಿಡುವುದಾಗಿದ್ದರೆ ನಾನು ಯಾಕೆ ಚನ್ನಪಟ್ಟಣದಲ್ಲಿ ಓಡಾಡುತ್ತಿದ್ದೆ ಎಂದಿದ್ದಾರೆ.
ರಾಮನಗರ ಹಾಗೂ ಚನ್ನಪಟ್ಟಣ ಎರಡು ಕಣ್ಣುಗಳಿದ್ದಂತೆ , ನಾನು ಸಾಯುವುದರೊಳಗೆ ಈ ಎರಡು ಊರುಗನ್ನು ಅವಳಿ ನಗರ ಮಾಡುತ್ತೇನೆ, ಈ ಎರಡೂ ಕ್ಷೇತ್ರ ನನ್ನ ಕಣ್ಣುಗಳಿದ್ದಂತೆ, ಹಾಗಾಗಿ ಈ ಕ್ಷೇತ್ರಗಳನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
0 التعليقات: