Monday, 18 January 2021

ನಾನು ದೆಹಲಿಗೆ ಯಾವುದೇ CD, ದೂರು ನೀಡೋದಕ್ಕೆ ಬಂದಿಲ್ಲ -ಶಾಸಕ ಎಂ.ಪಿ.ರೇಣುಕಾಚಾರ್ಯ


 ನಾನು ದೆಹಲಿಗೆ ಯಾವುದೇ CD, ದೂರು ನೀಡೋದಕ್ಕೆ ಬಂದಿಲ್ಲ -ಶಾಸಕ ಎಂ.ಪಿ.ರೇಣುಕಾಚಾರ್ಯ

ನವದೆಹಲಿ : ನಿನ್ನೆಯಷ್ಟೇ ಸಿಎಂ ಯಡಿಯೂರಪ್ಪ ಬಗ್ಗೆ ಮಾತನಾಡಿದ್ರೇ ಅವರ ಬಾಯಿಗೆ ಹುಳ ಬೀಳುತ್ತದೆ ಎಂದು ಹೇಳಿದ್ದಂತ ಶಾಸಕ ರೇಣುಕಾಚಾರ್ಯ, ಇಂದು ದೆಹಲಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಆದ್ರೇ ನಾನು ಯಾವುದೇ ಸಿಡಿ ಅಥವಾ ದೂರು ನೀಡೋದಕ್ಕೆ ದೆಹಲಿಗೆ ಬಂದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ದೆಹಲಿಯ ಭೇಟಿಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಶಾಸಕ ಎಂ.ಪಿ.ರೇಣುಕಾಚಾರ್ಯ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ತುರ್ತು ಭೇಟಿ ಮಾಡುವಂತೆ ಸೂಚಿಸಿದ್ದರಿಂದಾಗಿ ಭೇಟಿಗೆ ಬಂದಿದ್ದೇನೆ. ಅದರ ಹೊರತಾಗಿ ನಾನು ಸಿಡಿ ಅಥವಾ ದೂರು ಕೊಡೋದಕ್ಕೆ ದೆಹಲಿಗೆ ಬಂದಿಲ್ಲ ಎಂಬುದಾಗಿ ಹೇಳಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದ ಅವರು, ನನ್ನ ಭಾವನೆಗಳನ್ನು ಹೇಳೋದಕ್ಕೆ ದೆಹಲಿಗೆ ಬಂದಿದ್ದೇನೆ. ಯಾವ ವಿಚಾರವಾಗಿ ಚರ್ಚಿಸಲು ಬಂದಿದ್ದೇನೆ ಎಂಬುದನ್ನು ಹೇಳೋದಿಲ್ಲ. ಸಿಡಿ ತಂದಿದ್ದೇನೆ ಎನ್ನೋದೆಲ್ಲಾ ಊಹಾಪೋಹದ ಸುದ್ದಿ. ಸಿಡಿ ವಿಚಾರವೇ ನನಗೆ ಗೊತ್ತಿಲ್ಲ ಎಂದು ಹೇಳಿದರು.


SHARE THIS

Author:

0 التعليقات: