ಶಿವಮೊಗ್ಗ ಜಿಲೆಟಿನ್ ಸ್ಪೋಟ ದುರಂತ : ಐವರ ಮೃತದೇಹಗಳು ಪತ್ತೆ
ಶಿವಮೊಗ್ಗ : ಜಿಲ್ಲೆಯ ಹುಣಸೋಡು ಬಳಿ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಪೋಟ ಸಂಭವಿಸಿದ ಪರಿಣಾಮ 8 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಸದ್ಯ ಐವರ ಮೃತದೇಹ ಪತ್ತೆಯಾಗಿದೆ.
ಸ್ಥಳದಲ್ಲಿ ಈವರೆಗೆ ಐವರು ಕಾರ್ಮಿಕರ ಮೃತದೇಹ ಪತ್ತೆಯಾಗಿದ್ದು, ಇಬ್ಬರ ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿದೆ. ನಿನ್ನೆ ರಾತ್ರಿ 10.20 ಕ್ಕೆ ಸಂಭಿಸಿದ ಸ್ಪೋಟಕ್ಕೆ 8 ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದು, ಸದ್ಯ ಐವರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿದ್ದು, ಉಳಿದವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
0 التعليقات: