Saturday, 16 January 2021

ತನ್ನ ಗೌಪ್ಯತೆ ನೀತಿ ಮತ್ತು ಸೇವಾ ನಿಯಮಗಳ ನವೀಕರಣವನ್ನು ಮುಂದೂಡಿದ ವಾಟ್ಸಾಪ್


 ತನ್ನ ಗೌಪ್ಯತೆ ನೀತಿ ಮತ್ತು ಸೇವಾ ನಿಯಮಗಳ ನವೀಕರಣವನ್ನು ಮುಂದೂಡಿದ ವಾಟ್ಸಾಪ್

ನವದೆಹಲಿ, ಜನವರಿ 16: ಇತ್ತೀಚೆಗೆ ತನ್ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸಿದ್ದ ವಾಟ್ಸಾಪ್ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ನವೀಕರಣವನ್ನು ಮುಂದೂಡಿದೆ.

ವಾಟ್ಸಾಪ್ ತನ್ನ ನಿಯಮಗಳನ್ನು ನವೀಕರಿಸುವ ಬದಲು ಹಿಂದೆ ಸರಿಯಲು ಪ್ರಮುಖ ಕಾರಣವು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ವಾಟ್ಸಾಪ್ ಬಳಕೆದಾರರ ವಿರೋಧವಾಗಿದೆ. ಜೊತೆಗೆ ವಾಟ್ಸಾಪ್ ಕೂಡ ತನ್ನ ಗೌಪ್ಯತೆ ನೀತಿಗಳನ್ನು ನವೀಕರಿಸಿದ ಮೇಲಂತೂ, ಜನರು ಸಿಗ್ನಲ್ ಆಯಪ್‌ ಕಡೆಗೆ ಹೆಚ್ಚು ಮುಖ ಮಾಡುತ್ತಿದ್ದಾರೆ.

ಸದ್ಯ ವಾಟ್ಸಾಪ್‌ ನ ಸೇವಾ ನಿಯಮವನ್ನು ವಿರೋಧಿಸುತ್ತಿರುವ ಹೆಚ್ಚಿನ ಮಂದಿ ಹಾಗೂ ಮುಂದಿನ ದಿನಗಳಲ್ಲಿ ಹಣ ಪಾವತಿ ಮಾಡಬೇಕೆಂದಿರುವ ಟೆಲಿಗ್ರಾಮ್‌ ಆಯಪ್‌ಗೂ ಗುಡ್‌ಬೈ ಹೇಳಲು ಜನರು ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ ಸಿಗ್ನಲ್ ಆಯಪ್‌ಗೆ ಬೇಡಿಕೆ ಹೆಚ್ಚಿದೆ.

ತನ್ನ ಹೊಸ ಗೌಪ್ಯತೆ ಸೇವಾ ನಿಯಮಗಳ ನವೀಕರಣದಿಂದಾಗಿಯೇ ವಾಟ್ಸಾಪ್‌ಗೆ ದೊಡ್ಡ ಹೊಡೆತ ನೀಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸಿಗ್ನಲ್ ಆಯಪ್ ಬಳಕೆಗೆ ಮುಂದಾಗಿದ್ದಾರೆ. ಹೀಗಾಗಿ ವಾಟ್ಸಾಪ್ ತನ್ನ ನಿರ್ಧಾರವನ್ನು ಸ್ವಲ್ಪ ದಿನಗಳ ಮುಂದೂಡಿದೆ

'' ಈ ಸಂದೇಶ ತಲುಪಿದ ಎಲ್ಲರಿಗೂ ಧನ್ಯವಾದಗಳು. ವಾಟ್ಸಾಪ್ ಬಳಕೆದಾರರೊಂದಿಗೆ ನೇರವಾಗಿ ಸಂವಹನ ಮಾಡುವ ಮೂಲಕ ಯಾವುದೇ ಗೊಂದಲಗಳನ್ನು ಎದುರಿಸಲು ನಾವು ಇನ್ನೂ ಕೆಲಸ ಮಾಡುತ್ತಿದ್ದೇವೆ" ಎಂದು ಕಂಪನಿಯು ಶುಕ್ರವಾರ ತಡವಾಗಿ ಟ್ವೀಟ್ ಮಾಡಿದೆ.

''ಫೆಬ್ರವರಿ 8 ರಂದು ಯಾರ ಖಾತೆಯನ್ನು ಅಮಾನತುಗೊಳಿಸಲಾಗುವುದಿಲ್ಲ ಅಥವಾ ಅಳಿಸುವುದಿಲ್ಲ, ಮತ್ತು ಮೇ ನಂತರದವರೆಗೆ ನಾವು ನಮ್ಮ ವ್ಯವಹಾರ ಯೋಜನೆಗಳೊಂದಿಗೆ ಹಿಂತಿರುಗುತ್ತೇವೆ" ಎಂದು ಅದು ಹೇಳಿದೆ.

ಹೊಸ ವಾಟ್ಸಾಪ್ ಗೌಪ್ಯತೆ ನೀತಿಯು ಟೆಲಿಗ್ರಾಮ್ ಮತ್ತು ಸಿಗ್ನಲ್‌ಗೆ ಅನುಕೂಲವಾಗಿದೆ. ಟೆಲಿಗ್ರಾಮ್ ಅಪ್ಲಿಕೇಶನ್ ಜನವರಿಯಲ್ಲಿ 500 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರಿಗೆ ತಲುಪಿದೆ. ಇದು ಕೇವಲ 72 ಗಂಟೆಗಳಲ್ಲಿ 25 ಮಿಲಿಯನ್ ಬಳಕೆದಾರರನ್ನು ಪಡೆದಿದ್ದು ಹೊಸ ದಾಖಲೆಯನ್ನೇ ಮಾಡಿದೆ.


SHARE THIS

Author:

0 التعليقات: