Sunday, 3 January 2021

ಪ್ರತಿಯೊಬ್ಬ ರೈತನೂ ಸತ್ಯಾಗ್ರಹಿ: ಈ ಚಳುವಳಿಯಿಂದ ಅವರ ಹಕ್ಕುಗಳು ಮರಳಿ ಸಿಗುತ್ತವೆ: ರಾಹುಲ್


ಪ್ರತಿಯೊಬ್ಬ ರೈತನೂ ಸತ್ಯಾಗ್ರಹಿ: ಈ ಚಳುವಳಿಯಿಂದ ಅವರ ಹಕ್ಕುಗಳು ಮರಳಿ ಸಿಗುತ್ತವೆ: ರಾಹುಲ್


ನವದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಸಲಾಗುತ್ತಿರುವ ರೈತ ಚಳುವಳಿಯ ಕುರಿತಾಗಿ ದನಿ ಎತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ‘ರೈತ ಚಳುವಳಿಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ರೈತನೂ ಸತ್ಯಾಗ್ರಹಿ' ಎಂದು ಹೇಳಿಕೆ ನೀಡಿದ್ದಾರೆ.

ಪಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಚಳುವಳಿಯನ್ನು ಬೆಂಬಲಿಸಿರುವ ರಾಹುಲ್, ಈ ಸಂದರ್ಭವನ್ನು ಬ್ರಿಟೀಷರ ಕಾಲದ ಚಂಪಾರಣ್ ಹೋರಾಟಕ್ಕೆ ಹೋಲಿಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ಟೀಟ್ ಮಾಡಿರುವ ಅವರು, ದೇಶ ಸದ್ಯ ಬ್ರಿಟೀಷರ ಕಾಲದಲ್ಲಿದ್ದ ಚಂಪಾರಣ್ ಹೋರಾಟದ ಪರಿಸ್ಥಿತಿಯಲ್ಲಿದೆ. ಅಂದಿನ ಕಾಲದಲ್ಲಿ ಬ್ರಿಟೀಷರು ಕಂಪನಿ ಬಹಾದ್ದೂರ್ ಗಳಾಗಿದ್ದರು. ಆದರೆ ಈಗ ಪ್ರಧಾನಿ ಮೋದಿ ಮತ್ತವರ ಗೆಳೆಯರು ಬಹಾದ್ದೂರ್ ಗಳಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಈ ಚಳುವಳಿಯಲ್ಲಿ ರೈತರಿಗೆ ಅವರ ಹಕ್ಕುಗಳು ಮತ್ತೆ ಮರಳಿ ಸಿಗುತ್ತದೆ ಎಂದಿರುವ ರಾಹುಲ್ ಗಾಂಧಿ, 1917 ರಲ್ಲಿ ಬಿಹಾರದ ಚಂಪಾರಣ್ ನಲ್ಲಿ ಆರಂಭಗೊಂಡಿದ್ದ ಕೃಷಿ ಸಮಸ್ಯೆಗಳಿಗೆ ಸಂಬಂಧಿಸಿದ ರೈತರ ಹೋರಾಟವನ್ನು ನೆನಪಿಸಿಕೊಂಡು ಈ ಸತ್ಯಾಗ್ರಹವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿತ್ತು. ಇದರ ನೇತೃತ್ವವನ್ನು ಮಹಾತ್ಮಾ‍ಗಾಂಧಿ ಅವರು ವಹಿಸಿಕೊಂಡಿದ್ದರು ಎಂದು ಹೇಳಿದರು.

ಪ್ರಸ್ತುತ ರೈತ ಮಸೂದೆಯನ್ನು ವಿರೋಧಿಸಿ ನಡೆಸಲಾಗುತ್ತಿರುವ ಚಳುವಳಿಗೆ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ಈ ಕಾಯ್ದೆಯನ್ನು ರದ್ದುಗೊಳಿಸಬೇಂದು ಕೆಂದ್ರಕ್ಕೆ ಒತ್ತಾಯ ಹೇರಿದೆ.



SHARE THIS

Author:

0 التعليقات: