ಭಾರತದಲ್ಲಿ 'ಕೊರೋನಾ ಸೋಂಕಿತ'ರಿಗಾಗಿ 'ಕೋವಿಶೀಲ್ಡ್ ಲಸಿಕೆ'ಗೆ ಬಳಕೆಗೆ ತಜ್ಞರ ಸಮಿತಿ ಶಿಫಾರಸ್ಸು
ನವದೆಹಲಿ : ಆಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯವು ತುರ್ತು ಬಳಕೆಗಾಗಿ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆಯನ್ನು ಭಾರತದ ಔಷಧ ನಿಯಂತ್ರಕ ಸಂಸ್ಥೆಯ ತಜ್ಞರ ಸಮಿತಿಯು, ಡಿಸಿಜಿಐಗೆ ಶಿಫಾರಸ್ಸು ಮಾಡಿದೆ. ಡಿಸಿಜಿಐ ಅಂತಿಮವಾಗಿ ಲಸಿಕೆ ಬಳಕೆ ಮಾಡೋದಕ್ಕೆ ಅನುಮೋದಿಸಿದ್ರೇ, ದೇಶದಲ್ಲಿ ಕೋವಿಶೀಲ್ಡ್ ಲಸಿಕೆಯ ಬಳಕೆಗೆ ಅಂತಿಮವಾಗಿ ಅನುಮತಿ ಸಿಕ್ಕಂತೆ ಆಗುತ್ತದೆ.
ಲಸಿಕೆ ಯ ಪ್ರಸ್ತಾವನೆಗಳಿಗಾಗಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ವಿ.ಜಿ.ಸೋಮಾನಿ ಅವರು ರಚಿಸಿದ ತಜ್ಞರ ಸಮಿತಿಯು ಈ ವಾರ ಎರಡನೇ ಬಾರಿಗೆ ಸಭೆಯನ್ನು ಇಂದು ನಡೆಸಿದರು. ಇಂತಹ ಸಭೆಯಲ್ಲಿ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ COVID-19 ಲಸಿಕೆಗೆ ತುರ್ತು ಅನುಮೋದನೆಯನ್ನು ಶಿಫಾರಸ್ಸು ಮಾಡಿದೆ.
ಭಾರತದಲ್ಲಿ ಕೋವಿಶೀಲ್ಡ್ ಎಂದು ಹೆಸರಿಸಿದ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ COVID-19 ಲಸಿಕೆಯು ಶೇ.70.4% ರಷ್ಟು ಪರಿಣಾಮವನ್ನು ಕೊರೋನಾ ಸೋಂಕಿತರಿಗೆ ನೀಡಿದಾಗ ತೋರಿಸಿದೆ. ಈ ಲಸಿಕೆಯನ್ನು ನೀಡಿದ ನಂತ್ರ ಯಾವುದೇ ಅಡ್ಡ ಪರಿಣಾಮ, ತೊಂದರೆ ಉಂಟಾಗಿಲ್ಲ ಎಂಬುದಾಗಿಯೂ ಸಂಶೋಧಕರು ಹೇಳಿದ್ದಾರೆ.
ಕಳೆದ ತಿಂಗಳು ಭಾರತದಲ್ಲಿ ಬ್ರಿಟಿಷ್ ಔಷಧ ತಯಾರಕರ ಲಸಿಕೆಯ ಆವೃತ್ತಿಗೆ ತುರ್ತು ಬಳಕೆಯ ಪರವಾನಗಿಯನ್ನು ಸೀರಮ್ ಇನ್ ಸ್ಟಿಟ್ಯೂಟ್ ಕೇಳಲಾಗಿತ್ತು. ಯುನೈಟೆಡ್ ಕಿಂಗ್ ಡಮ್ ನಿಯಂತ್ರಕವು AstraZeneca ನ ಮೂಲ ಆವೃತ್ತಿಗೆ ಅನುಮೋದನೆ ನೀಡಿದ ನಂತರ ಪರಿಷ್ಕೃತ ದತ್ತಾಂಶವನ್ನು ಸಲ್ಲಿಸುವಂತೆ ತಜ್ಞರ ಸಮಿತಿ ಈ ಹಿಂದೆ ಸೂಚಿಸಿತ್ತು. ಈ ಎಲ್ಲಾ ಬೆಳವಣಿಗೆಯ ಬಳಿಕ, ಇದೀಗ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ COVID-19 ಲಸಿಕೆಗೆ ತುರ್ತು ಅನುಮೋದನೆಯನ್ನು ಶಿಫಾರಸ್ಸು ಮಾಡಿದೆ. ಇಂತಹ ಶಿಫಾರಸ್ಸನ್ನು ಡಿಸಿಜಿಐ ಅಂತಿಮವಾಗಿ ಸಮ್ಮತಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
0 التعليقات: