Saturday, 9 January 2021

'ನಾನು ಹಳ್ಳಿಯಿಂದ ಬಂದವನು, ಮಾತು ಸ್ವಲ್ಪ ಒರಟು: ನನ್ನ ಪ್ರತಿ ಹೇಳಿಕೆಗಳನ್ನು ವಿವಾದವಾಗಿಸುತ್ತಾರೆ'


 'ನಾನು ಹಳ್ಳಿಯಿಂದ ಬಂದವನು, ಮಾತು ಸ್ವಲ್ಪ ಒರಟು: ನನ್ನ ಪ್ರತಿ ಹೇಳಿಕೆಗಳನ್ನು ವಿವಾದವಾಗಿಸುತ್ತಾರೆ'

ಬೆಂಗಳೂರು: ನಾನು ಹಳ್ಳಿಯಿಂದ ಬಂದವನು, ಮಾತು ಸ್ವಲ್ಪ ಒರಟು, ಹಳ್ಳಿಭಾಷೆಯಲ್ಲಿ ಮಾತಾಡುತ್ತೇನೆ. ಇತ್ತೀಚೆಗೆ ನಾನು ಮಾತಾಡಿದ್ದೆಲ್ಲವನ್ನೂ ವಿವಾದ ಮಾಡುವುದು ಚಾಳಿಯಾಗಿಬಿಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ನಾನು ಒಬ್ನೇ ಸಿಕ್ಕವನು ಟೀಕೆ ಮಾಡೋಕೆ. ಬಿಜೆಪಿ, ಜೆಡಿಎಸ್ ಎಲ್ಲರೂ ನನ್ನ ಮೇಲೆಯೇ ಬೀಳುವವರು, ನನ್ನ ರಕ್ಷಣೆಗೆ ಜನರೇ ಬರಬೇಕು ಅಂತಾ ಸಿದ್ದರಾಮಯ್ಯ ಅಳಲು ತೋಡಿಕೊಂಡದ್ದಾರೆ

ದನದ ಮಾಂಸ ತಿನ್ಬೇಕೆಂದರೆ ತಿನ್ತೀನಿ, ನೀ ಯಾವನಯ್ಯಾ ಕೇಳೋಕೆ ಎಂದು ಕೇಳಿದ್ದು ನಿಜ. ನಾನು ಈವರೆಗೆ ದನದ ಮಾಂಸ ತಿಂದಿಲ್ಲ, ತಿನ್ನುವುದೂ ಇಲ್ಲ. ಗೋಹತ್ಯೆ ನಿಷೇಧ ಕಾಯ್ದೆಯ ಹಿಂದಿನ ಬಿಜೆಪಿಯ ಆತ್ಮವಂಚಕ ನಡವಳಿಕೆಯನ್ನು ಪ್ರಶ್ನಿಸಲು ಆ ರೀತಿ ಹೇಳಿದ್ದೆ. ಇದರಲ್ಲೇನಿದೆ ವಿವಾದ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಓಟು ಹಾಕಲು ಊರಿಗೆ ಹೋಗಿದ್ದಾಗ ಕಾರ್ಯಕರ್ತರ ಮನೆಗೆ ಊಟಕ್ಕೆ ಹೋಗಿದ್ದೆ. ಅಲ್ಲಿ ಕೋಳಿ ಮಾಡಿದ್ದರು. ನಮ್ಮೂರ ಯುವಕನೊಬ್ಬ ಇಂದು ಹನುಮಜಯಂತಿ ಮಾಂಸ ತಿನ್ನೋದಿಲ್ಲ ಎಂದು ಹೇಳಿದಾಗ, ಹನುಮ ಜಯಂತಿ ದಿನ ಕೆಲವು ಕಡೆ ಮರಿ ಹೊಡೆಯುತ್ತಾರೆ, ಮಾಂಸ ತಿಂದರೆ ತಪ್ಪೇನು ಎಂದು ಕೇಳಿದ್ದೆ. ಅದನ್ನೂ ಕೂಡಾ ವಿವಾದ ಮಾಡಿಬಿಟ್ಟರು ಎಂದು ನೋವು ತೋಡಿಕೊಂಡಿದ್ದಾರೆ.


SHARE THIS

Author:

0 التعليقات: