Friday, 15 January 2021

ಸಯ್ಯಿದ್ ತ್ವಾಹಿರುಲ್ ಅಹ್ದಲ್ ಖ.ಸಿ : ಜೀವನ ಮತ್ತು ದರ್ಶನ

 

ಸಯ್ಯಿದ್ ತ್ವಾಹಿರುಲ್ ಅಹ್ದಲ್ ಖ.ಸಿ : ಜೀವನ ಮತ್ತು ದರ್ಶನ

      ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರು ಕಾಸರಗೋಡು ಜಿಲ್ಲೆಯ ಮುಹಿಮ್ಮಾತ್ ಎಂಬ ಸಂಸ್ಥೆಯ ಶಿಲ್ಪಿ. ಪ್ರಮುಖ ವಿದ್ವಾಂಸ, ಸಂಘಟಕ, ನಾಯಕ, ಆಧ್ಯಾತ್ಮಿಕ ಗುರು, ಹೀಗೆ ಎಲ್ಲಾ ಹೆಸರಿಗೂ ಅರ್ಹರಾದ ಶುದ್ಧ ಮನಸ್ಸಿನ ನಿಷ್ಕಳಂಕ ವ್ಯಕ್ತಿತ್ವ. ತ್ವಾಹಿರ್ ಎಂಬ ಅರ್ಥವನ್ನು ಸೂಚಿಸುವಂತೆ ಮನಸ್ಸು ಶುದ್ದಿಯಾದ ಸಯ್ಯಿದ್ ಆಗಿದ್ದರು ಎಂದು ಹತ್ತಿರದಿಂದ ಕಂಡ ಎಲ್ಲರೂ ಹೇಳಿದ ಸತ್ಯವದು. ತಂಙಳುಸ್ತಾದ್ ಮುಹಿಮ್ಮಾತ್ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಲ್ಲ. ಬದಲು ಅವರು ಒಂದು ಸಮುದಾಯವನ್ನು ಕಟ್ಟಿ ಬೆಳೆಸಿದರು. ಒಂದು ವಿದ್ವಾಂಸ ಹೇಗಿರಬೇಕು? ನಾಯಕ ಹೇಗಿರಬೇಕು? ಸಂಘಟಕ ಹೇಗಿರಬೇಕು? ಶಿಕ್ಷಕ ಹೇಗಿರಬೇಕು? ನಿಷ್ಕಳಂಕಂತೆ ಎಂದರೇನು? ಮುಕ್ತ ಹೃದಯ ಎಂದರೇನು? ಮುಂತಾದ ಸಮುದಾಯವನ್ನು ಕಟ್ಟಿ ಬೆಳೆಸುವ ಎಲ್ಲರಿಗೂ ಮಾದರಿ ಯೋಗ್ಯವಾದ ಜೀವನವನ್ನು ತೋರಿಸಿಕೊಟ್ಟವರು.

       ಶೈಖುನಾ ತಂಙಳುಸ್ತಾದ್ ರವರಿಗೆ ವಿದ್ವಾಂಸರ ನಡುವೆ ಒಂದು ವಿಶೇಷ ಸ್ಥಾನಮಾನವಿತ್ತು. ಅವರು ಇತರೆಲ್ಲರಂತೆ ಅಲ್ಲ. ಪ್ರತ್ಯೇಕ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು. ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಪ್ರತಿಯೊಂದು ವಿಷಯದ ಬಗ್ಗೆ ಆಳನೋಟ, ವಿಶಿಷ್ಟ ಚಿಂತನೆ, ವಿಷಯದ ಎಲ್ಲಾ ಭಾಗಗಳನ್ನು ಅಧ್ಯಯನ ನಡೆಸಿದ ನಂತರವಷ್ಟೇ ಆ ಬಗ್ಗೆ ಅಭಿಪ್ರಾಯ. ಅತೀ ಸೂಕ್ಷ್ಮ ಭಾಗಗಳ ಬಗ್ಗೆ ಗಮನ. ಮುಂತಾದ ದೂರದೃಷ್ಟಿಯ ನಿಲುವು ಆಗಿದ್ದರು ತಂಙಳುಸ್ತಾದ್. ಆದ್ದರಿಂದ ತನ್ನ ಸಹಪಾಠಿಗಳೆಡೆಯಲ್ಲಿ ಮುತ್ತಬಿಸ್ನುನ್ನ ಎಂಬ ಗೌರವ ನಾಮದಿಂದ ಪ್ರಸಿದ್ಧಿಯಾದರು.

         ಹೌದು! ತಂಙಳುಸ್ತಾದರ ಜೀವನವೇ ಸೂಕ್ಷ್ಮತೆ. ಪ್ರತಿಯೊಂದು ಕಷ್ಟಕರವಾದ ಸನ್ನಿವೇಶವನ್ನು ಅತ್ಯಂತ ಸೂಕ್ಷ್ಮವಾಗಿ ಉಸ್ತಾದ್ ನಿಭಾಯಿಸುತ್ತಿದ್ದರು. ಅದು ಎಷ್ಟರಮಟ್ಟಿಗೆಂದರೆ ತನ್ನ ಕೊನೆಯ ಕಾಲದಲ್ಲಿ ರೋಗಗ್ರಸ್ತರಾಗಿ ಆಸ್ಪತ್ರೆಯಲ್ಲಿ ಅಧಿಕ ದಿನ ತಂಗಲಿಲ್ಲ. ಯಾಕೆಂದರೆ,  ಶುಶ್ರುಷೆಗೆಂದು ಬರುತ್ತಿರುವ ನರ್ಸುಗಳು ತನ್ನನ್ನು ಮುಟ್ಟಬಾರದು, ನಾನು   ಅನ್ಯ ಹೆಂಗಸರನ್ನು ನೋಡಬಾರದು ಎಂಬ ನಿಲುವು ಹೊಂದಿವರಾಗಿದ್ದರು ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್.

   ಇನ್ನು ನಮಾಝ್ ಮಾಡಬಾರದು ಎಂದು ಡಾಕ್ಟರ್ ಆದೇಶ ನೀಡಿದ ನಂತರವು ಸುನ್ನತ್ ನಮಾಝ್ ಗಳನ್ನು ಕೂಡ ಬಿಡದೆ ನಿರ್ವಹಿಸುತ್ತಿದ್ದರು ಎಂದು ಕೇಳುವಾಗ ರೋಮಾಂಚನಗೊಳ್ಳುತ್ತದೆ. ಆಧುನಿಕ ಯುಗದಲ್ಲಿ ಒಂದೇ ಒಂದು ಕರಾಹತ್ ಕೂಡ ಬರದಂತೆ ತನ್ನ ಜೀವನವನ್ನೇ ಕಾಪಾಡಲು ಅವರಿಗೆ ಸಾಧ್ಯವಾದುದೇ ಅವರ ಅತಿದೊಡ್ಡ ಪವಾಡ.

        ತ್ಯಾಗದ ಅತ್ಯುನ್ನತ ಮಾದರಿಯಾಗಿತ್ತು ತಂಙಳ್ ಉಸ್ತಾದರ ಬಾಲ್ಯಕಾಲ. ಕಡುಬಡತನದ ಹಾಗೂ ಸಂಕಷ್ಟದ ಕುಟುಂಬದ ಹಿನ್ನೆಲೆಯಾಗಿತ್ತು ತಂಙಳುಸ್ತಾದ್ ರವರ ಮನಸ್ಸನ್ನು ದೃಡ ಗೊಳಿಸಿದ್ದು. ಕಷ್ಟ ಸಂಕಷ್ಟಗಳ ಮಧ್ಯೆಯೂ ಮದ್ರಸ ಕಲಿಕೆಯೊಂದಿಗೆ ದರ್ಸ್ ಕಲಿಕೆಯನ್ನು ಪ್ರಾರಂಭಿಸಿದ ತಂಙಳುಸ್ತಾದ್ ಹಲವಾರು ದರ್ಸ್ ಗಳಲ್ಲಿ ಕಲಿತು 1972 ರಲ್ಲಿ ಫೈಝಿ

ಬಿರುದು ಪಡೆದು ಹೊರಬರುತ್ತಾರೆ. ನಂತರ ತನ್ನ ಕರ್ಮ ಮಂಡಲವಾಗಿ ಕಾಸರಗೋಡನ್ನು ಆಯ್ಕೆ  ಮಾಡುತ್ತಾರೆ. ಅಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಸಮಾಜ ಸೇವೆ ಸಂಘಟನಾ ಕ್ಷೇತ್ರದಲ್ಲಿ ತಂಙಳರು ಅಪಾರ ಗಮನ ಕೊಟ್ಟರು. ನಂತರ ಪ್ರಾರಂಭಿಸಿದಂತಹ ಸಾಮಾಜಿಕ ಕ್ರಾಂತಿ 1992 ರಲ್ಲಿ ಮುಹಿಮ್ಮಾತ್ ಜನ್ಮ ತಾಳುವುದರೊಂದಿಗೆ ಕ್ರಾಂತಿ ಮುಂದುವರಿಯಿತು.

       ಸುಮಾರು 29 ವರ್ಷಗಳ ಮುಂಚೆ ಕೇವಲ ಕಲ್ಲು ಮುಳ್ಳುಗಳಿಂದಲೂ, ಕರಿಬಂಡೆಗಳಿಂದಲೂ ಆವೃತವಾಗಿದ್ದ ಪಿಶಾಚಿ ಗಳಿಂದಲೂ ಮನುಷ್ಯ ಪಿಶಾಚಿಗಳಾದ ವಹ್ಹಾಬಿಗಳಿಂದಲೂ‌ ಮಲಿನಗೊಂಡಿದ್ದ ಒಂದು ಪ್ರದೇಶವಾಗಿತ್ತು ಮುಹಿಮ್ಮಾತ್ ಒಳಗೊಂಡ ಕಟ್ಟತ್ತಡ್ಕ ಪ್ರದೇಶ. ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಎಂಬ ಆಧ್ಯಾತ್ಮಿಕ ಪುರುಷ‌ ನಾಡನ್ನು ಬೆಳಗಿಸಿದರು. ನೈಜ ಪಿಶಾಚಿ ಗಳಿಂದಲೂ ಮನುಷ್ಯ ಪಿಶಾಚಿಗಳಾಗಿರುವ ವಹಾಬಿಗಳಿಂದಲೂ ನಾಯಕರು ಆ ನಾಡನ್ನು ಸಂರಕ್ಷಿಸಿ ಮುಹಿಮ್ಮಾತ್ ಎಂಬ ಮತ ಲೌಕಿಕ ಸಮನ್ವಯ ವಿದ್ಯಾ ಸಮುಚ್ಚಯವನ್ನು ಕಟ್ಟಿ ಬೆಳೆಸಿ ಅಹ್ಲುಸುನ್ನತಿ ವಲ್ ಜಮಾಅತಿನ ಭದ್ರಕೋಟೆ ಯನ್ನಾಗಿ ಮುಹಿಮ್ಮಾತಿನ ಪ್ರದೇಶವನ್ನು ಬದಲಾಯಿಸಿದರು. ನಿಸ್ವಾರ್ಥ ಹಾಗೂ ನಿಷ್ಕಳಂಕವಾದ ಸೇವೆಯ ಮೂಲಕ ಸಯ್ಯಿದ್ ತ್ವಾಹಿರುಲ್ ಅಹ್ದಲ್  ತಂಙಳುಸ್ತಾದ್ ಹಳಿ ತಪ್ಪಿ ಸಂಚರಿಸುತ್ತಿದ್ದ ಜನತೆಯನ್ನು ನೈಜ ಹಳಿಯಲ್ಲಿ ಭದ್ರಗೊಳಿಸಲು ಸಾಧ್ಯವಾಯಿತು.

-ಝಾಕೀರ್ ಉರುವಾಲ್ ಪದವು


SHARE THIS

Author:

0 التعليقات: