Sunday, 10 January 2021

ಪ್ರತಿಭಟನೆ ನಡೆಸುತ್ತಿರುವ ರೈತರಿಂದಲೇ ಹಕ್ಕಿ ಜ್ವರ ಹರಡುತ್ತಿದೆ : ಬಿಜೆಪಿ ಶಾಸಕರ ವಿವಾದಾತ್ಮಕ ಹೇಳಿಕೆ


 ಪ್ರತಿಭಟನೆ ನಡೆಸುತ್ತಿರುವ ರೈತರಿಂದಲೇ ಹಕ್ಕಿ ಜ್ವರ ಹರಡುತ್ತಿದೆ : ಬಿಜೆಪಿ ಶಾಸಕರ ವಿವಾದಾತ್ಮಕ ಹೇಳಿಕೆ

ಕೋಟಾ: ಪ್ರತಿಭಟನಾನಿರತ ರೈತರಿಂದ ಹಕ್ಕಿ ಜ್ವರ ಹರಡುತ್ತಿದೆ ಎಂದು ರಾಜಸ್ಥಾನದ ಕೋಟಾದ ರಾಮಗಂಜ್ ಮಂಡಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಮದನ್ ದಿಲಾವರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಹಕ್ಕಿ ಜ್ವರ ಹರಡಲು ಪ್ರತಿಭಟನಾನಿರತ ರೈತರೇ ಕಾರಣ. ಪ್ರತಿಭಟನಾಕಾರರು 'ಚಿಕನ್ ಬಿರಿಯಾನಿ ಮತ್ತು ಡ್ರೈ ಫ್ರೂಟ್ಸ್​ಗಳನ್ನು ತಿನ್ನುತ್ತ ಆನಂದಿಸುತ್ತಿದ್ದಾರೆ. ಇದು ರೋಗವನ್ನು ಹರಡುವ ಪಿತೂರಿಯಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿದವರಲ್ಲಿ ಭಯೋತ್ಪಾದಕರು, ದರೋಡೆಕೋರರು ಮತ್ತು ಕಳ್ಳರೂ ಇರಬಹುದು, ಅವರು ರೈತರ ಶತ್ರುಗಳೂ ಆಗಿರಬಹುದು. ಸರ್ಕಾರವು ಅವರನ್ನು ಆಂದೋಲನದ ಸ್ಥಳಗಳಿಂದ ಓಡಿಸಿ, ಹಕ್ಕಿ ಜ್ವರ ತಡೆಗಟ್ಟಬೇಕು, ಇಲ್ಲವಾದರೆ ಮುಂದೆ ಹಕ್ಕಿ ಜ್ವರ ದೊಡ್ಡ ಸಮಸ್ಯೆಯಾಗಬಹುದು.' ಎಂದು ಹೇಳಿದ್ದಾರೆ.


SHARE THIS

Author:

0 التعليقات: