ನಾನು ಇರುವಾಗ್ಲೇ ಹಾಸನದಲ್ಲಿ ʼಏರ್ಪೋರ್ಟ್ ನಿರ್ಮಾಣʼವಾಗಲಿ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ
ಹಾಸನ: ತುಮಕೂರು ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಹಾಸನದಲ್ಲಿ ಇನ್ನೂ ಕಾಮಗಾರಿ ಆರಂಭವೇ ಆಗಿಲ್ಲ. ನಾನು ಇರುವಾಗಲೇ ಏರ್ಪೋರ್ಟ್ ನಿರ್ಮಾಣವಾಗಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಮಾಜ ಪ್ರಧಾನಿಗಳು, ' ಹಾಸನ ಜಿಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನನ್ನ ಅವಧಿಯಲ್ಲಿ ಆಗಿದ್ದು ಇನ್ನೂ ಕೆಲಸ ಆರಂಭ ಆಗಿಲ್ಲ. ನಮ್ಮ ಜಿಲ್ಲೆಯ ಕೆಲಸಗಳಿಗೆ ಆದ್ಯತೆ ನೀಡಿ. ನಾನು ಇರುವಾಗಲೇ ಏರ್ಪೋರ್ಟ್ ನಿರ್ಮಾಣವಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ' ಎಂದರು.
ಇನ್ನು ಹಾಸನ ಜಿಲ್ಲೆಗೆ ಯಾವುದು ಶಾಶ್ವತ ಯೋಜನೆ ಕೊಟ್ಟಿದ್ದೀರಿ. ಯೋಜನೆ ಬಗ್ಗೆ ಮಾಹಿತಿ ನೀಡಿ ಎಂದು ಮುಖ್ಯಂತ್ರಿಗಳನ್ನ ಪ್ರಶ್ನಿಸಿದ ದೇವೇಗೌಡರು, ಜಿಲ್ಲೆಗೆ ಐಐಟಿ ತರುವ ಬಗ್ಗೆ ಪ್ರಧಾನಿ ಭೇಟಿಯಾಗಿ ಚರ್ಚೆ ನಡೆಸಲಿದ್ದೇನೆ ಎಂದರು.
0 التعليقات: