Tuesday, 12 January 2021

ಮಂತ್ರಿ ಸ್ಥಾನ ಕೈ ತಪ್ಪುವ ಆತಂಕ : ಸಿಎಂ ಬಿ.ಎಸ್.ವೈ ಭೇಟಿಯಾದ ಮುನಿರತ್ನ


ಮಂತ್ರಿ ಸ್ಥಾನ ಕೈ ತಪ್ಪುವ ಆತಂಕ : ಸಿಎಂ ಬಿ.ಎಸ್.ವೈ ಭೇಟಿಯಾದ ಮುನಿರತ್ನ

ಬೆಂಗಳೂರು : ನಾಳೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಬಹಳ ಕುತೂಹಲ ಕೆರಳಿಸಿದೆ. ಈ ನಡುವೆ ಶಾಸಕ ಮುನಿರತ್ನ ಅವರನ್ನು ಕ್ಯಾಬಿನೆಟ್ ಗೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಆತಂಕದಿಂದ ಸಿಎಂ ಯಡಿಯೂರಪ್ಪ ಅವರನ್ನು ಮುನಿರತ್ನ ಭೇಟಿಯಾಗಿದ್ದಾರೆ.

ಕಾವೇರಿ ನಿವಾಸದಲ್ಲಿ ಇಂದು ಸಿಎಂ ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮುನಿರತ್ನ ಬಹಳ ಟೆನ್ಶನ್ ನಲ್ಲಿ ಇದ್ದರು ಎನ್ನಲಾಗಿದೆ. ಬಹಳ ಸಮಯ ಮುನಿರತ್ನ ಸಿಎಂ ಜೊತೆ ಚರ್ಚೆ ನಡೆಸಿ ವಾಪಸ್ ಆಗಿದ್ದಾರೆ. ಈ ವೇಳೆ ತಮಗೆ ಮಂತ್ರಿಸ್ಥಾನ ನೀಡುವಂತೆ ಸಿಎಂ ಗೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ನಾಳೆ ಏನಾಗುತ್ತೋ ಕಾದು ನೋಡಬೇಕು.




SHARE THIS

Author:

0 التعليقات: