ದೇಶಾದ್ಯಂತ ವ್ಯಾಕ್ಸಿನ್ ಹಂಚುತ್ತೇವೆ : ಪ್ರಧಾನಿ ಮೋದಿ ಘೋಷಣೆ
ನವದೆಹಲಿ : ನಮ್ಮ ದೇಶದ ವಿಜ್ಞಾನಿಗಳ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ. ಆತ್ಮ ನಿರ್ಭಾರ ಯೋಜನೆಯಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2 ಕೋವಿಡ್ ಲಸಿಕೆ ತಯಾರಿಸುವಲ್ಲಿ ಭಾರತ ಯಶಸ್ವಿಯಾಗಿದೆ. ದೇಶಾದ್ಯಂತ ಜನವರಿಗೆ ಕೊರೊನಾ ಲಸಿಕೆ ನೀಡಲಾಗುವುದು. ಆತ್ಮ ನಿರ್ಭಾರ ಯೋಜನೆಯಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರ, ಭಾರತ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ ಎಂದರು.
ಭಾರತ ಮುಂದಿನ ದಿನಗಳಲ್ಲಿ ವಿದೇಶಗಳಿಗೆ ವ್ಯಾಕ್ಸಿನ್ ರಪ್ತು ಮಾಡಲಿದೆ. ಜಗತ್ತಿನಲ್ಲೇ ಅತಿದೊಡ್ಡ ಕೊರೊನಾ ಗೆ ಲಸಿಕೆ ನೀಡುವ ಕಾರ್ಯಕ್ರಮ ಭಾರತದಲ್ಲಿ ನಡೆಯಲಿದೆ.ಇದುವರೆಗೆ ಭಾರತ ವಿದೇಶಗಳ ಮೇಲೆ ಅವಲಂಬಿತವಾಗಿತ್ತು. ಇದೀಗ ಭಾರತದ ಮೇಲೆ ಹಲವು ದೇಶಗಳು ಅವಲಂಬಿತವಾಗಿವೆ. ಹೊವ ವರ್ಷ ಹಲವು ಅವಕಾಶಗಳನ್ನು ಹೊತ್ತು ತಂದಿದೆ. ಭಾರತದ ಎದರು ಹೊಸ ಗುರಿ, ಹೊಸ ಸವಾಲುಗಳಿವೆ. ಈಗ ಕಾಲ ಬದಲಾಗಿದೆ. ಆಮದು ಕಡಿಮೆಯಾಗಿದೆ. ರಪ್ತು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
0 التعليقات: