ಚೀನಾ ಮೂಲದ ಎಂಟು ಆಯಪ್ಗಳಿಗೆ ನಿಷೇಧ ಹೇರಿದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಲಿಪೇ ಮೊಬೈಲ್ ಪೇಮೆಂಟ್ ಆಯಪ್ ಸೇರಿದಂತೆ ಚೀನಾ ಮೂಲದ ಎಂಟು ಪ್ರಮುಖ ಸಾಫ್ಟ್ವೇರ್ ಅಪ್ಲಿಕೇಷನ್ಗಳ ವಹಿವಾಟುಗಳನ್ನು ನಿಷೇಧಿಸುವ ಎಕ್ಸಿಕ್ಯೂಟಿವ್ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಚೀನಾ ಜೊತೆಗಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿರುವುದಂತೆ ತಮ್ಮ ಅಧಿಕಾರವಧಿಯ ಕೊನೆಯ ಹಂತದಲ್ಲಿ ಡೊನಾಲ್ಡ್ ಟ್ರಂಪ್, ಎಂಟು ಆಯಪ್ಗಳನ್ನು ನಿಷೇಧ ಮಾಡುವ ಮೂಲಕ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿರುವುದು ಹೆಚ್ಚಿನ ಕುತೂಹಲ ಕೆರಳಿಸಿದೆ.
ಚೀನಾ ಮೂಲದ ಸಾಫ್ಟ್ವೇರ್ ಅಪ್ಲಿಕೇಷನ್ಗಳಿಂದ ರಾಷ್ಟ್ರೀಯ ಭದ್ರತೆಗೆ ಉಂಟಾಗುವ ಬೆದರಿಕೆಯನ್ನು ನಿಗ್ರಹಿಸುವ ಗುರಿಯನ್ನು ಅಮೆರಿಕ ಹೊಂದಿದೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಬೃಹತ್ ಯೂಸರ್ ಬೇಸ್ ಹೊಂದಿರುವ ಈ ಅಪ್ಲಿಕೇಷನ್ಗಳಿಂದ ಸೂಕ್ಷ್ಮ ಡೇಟಾಗಳನ್ನು ಸೋರಿಕೆ ಮಾಡುವ ಭೀತಿ ಎದುರಾಗಿದೆ. ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಚೀನಾ ಮೂಲದ ಸಾಫ್ಟ್ವೇರ್ ಅಪ್ಲಿಕೇಷನ್ ಡೆವಲಪರ್ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶವು ಸೂಚಿಸುತ್ತದೆ.
0 التعليقات: