ಪತ್ರಕರ್ತರ ವಿರುದ್ಧ ಎಫ್ಐಆರ್ ಖಂಡಿಸಿದ ಭಾರತೀಯ ಸಂಪಾದಕರ ಒಕ್ಕೂಟ
ನವದೆಹಲಿ : ರೈತರ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ರೈತನ ಸಾವಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಪತ್ರಕರ್ತರು, ಸಂಪಾದಕರ ವಿರುದ್ಧ ಎಫ್ಐಆರ್ ದಾಖಲಿಸಿರುವ ಕ್ರಮವನ್ನು ಭಾರತೀಯ ಸಂಪಾದಕರ ಒಕ್ಕೂಟ ಖಂಡಿಸಿದೆ.
ಎಫ್ ಐ ಆರ್ ದಾಖಲಿಸಿ ಬೆದರಿಕೆಯೊಡ್ಡುವುದರ ಜೊತೆಗೆ ಕಿರುಕುಳ ನೀಡುವ ಉದ್ದೇಶವನ್ನು ಒಳಗೊಂಡಿದೆ ಎಂದು ಒಕ್ಕೂಟ ಆಕ್ಷೇಪಿಸಿದೆ.
ಈ ಕುರಿತು ನೀಡಿರುವ ಹೇಳಿಕೆಯಲ್ಲಿ ಒಕ್ಕೂಟವು, ಕೂಡಲೇ ಎಫ್ಐಆರ್ ಅನ್ನು ರದ್ದುಪಡಿಸಬೇಕು ಹಾಗೂ ನಿರ್ಭೀತ ಪರಿಸರದಲ್ಲಿ ಕೆಲಸ ಮಾಡಲು ಮಾಧ್ಯಮಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.
ರ್ಯಾಲಿ ವೇಳೆ ರೈತರೊಬ್ಬರ ಸಾವು ಪ್ರಕರಣದ ವರದಿಗೆ ಸಂಬಂಧಿಸಿ ಪತ್ರಕರ್ತರು ಹಾಗೂ ಸಂಸ್ಥೆಗಳನ್ನು ಗುರಿಯಾಗಿಸಿ ಕ್ರಮ ಜರುಗಿಸಲಾಗುತ್ತಿದೆ.
0 التعليقات: