ಚಿರಾಗಾಂವ್ : ಬಾಲಕಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮಾಜಿ ಬಿಜೆಪಿ ಶಾಸಕನಿಗೆ ಜನರು ಥಳಿಸಿದ್ದು, ಸದ್ಯ ಈ ಘಟನೆಯ ವಿಡೀಯೋ ವೈರಲ್ ಆಗಿದೆ.
ಚಿರಾಗಾಂವ್ನ ಮಾಜಿ ಬಿಜೆಪಿ ಶಾಸಕ ಮಾಯಾ ಶಂಕರ್ ಪಾಠಕ್ ಅವರ ವಿರುದ್ಧ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಪಾಠಕ್ ಅವರು ಇಲ್ಲಿನ ಎಂಪಿ ಗ್ರೂಪ್ಗೆ ಸೇರಿದ ಕಾಲೇಜೊಂದರಲ್ಲಿ ಮುಖ್ಯಸ್ಥರಾಗಿದ್ದಾರೆ. ಇದೇ ಸಂಸ್ಥೆಯಲ್ಲಿ 9ನೇ ತರಗತಿ ಓದುತ್ತಿರುವ ಬಾಲಕಿಗೆ ಪಾಠಕ್ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಕಿಯ ಕುಟುಂಬಸ್ಥರು ನೇರವಾಗಿ ಮಾಜಿ ಶಾಸಕರ ಬಳಿ ಈ ಕುರಿತಂತೆ ಮಾತುಕತೆ ನಡೆಸಿದ್ದಾರೆ, ನಂತರ ಕುಟುಂಬದವರು ಮತ್ತು ಸ್ಥಳೀಯರು ಅವರಿಗೆ ಥಳಿಸಿದ್ದಾರೆ. ಬಳಿಕ ಶಾಸಕರು ತಮ್ಮ ತಪ್ಪನ್ನು ಒಪ್ಪಿ ಕ್ಷಮೆ ಕೇಳಿದ್ದಾರೆ. ಇದೆಲ್ಲವೂ ವಿಡಿಯೋದಲ್ಲಿ ದಾಖಲಾಗಿದೆ.
ನ್ನು ಈ ಪ್ರಕರಣದ ಕುರಿತಾಗಿ ಬಾಲಕಿಯ ಪೋಷಕರು ಪೊಲೀಸರ ಬಳಿ ದೂರು ದಾಖಲಿಸಿಲ್ಲ. ಹಲ್ಲೆ ಕುರಿತಾಗಿಯೂ ಮಾಜಿ ಶಾಸಕರೂ ಕೂಡಾ ಯಾವುದೇ ದೂರು ದಾಖಲಿಸಿಲ್ಲ. ಇದೀಗ ವಿಡಿಯೋ ಆಧಾರದ ಮೇಲೆ ಪೊಲೀಸರೇ ಸ್ವಯಂ ಪ್ರೇರಿತವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಯುತ್ತಿರೋದಾಗಿ ಮಾಹಿತಿ ನೀಡಿದ್ದಾರೆ.
ಈ ನಡುವೆ, ಮಾಜಿ ಶಾಸಕರು ಈ ಕೃತ್ಯದ ಹಿಂದೆ ರಾಜಕೀಯ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ಧಾರೆ. ಬಾಲಕಿಗೆ ಬೈದು ಮನೆಗೆ ಕಳಿಸಲಾಗಿತ್ತು. ಆದ್ರೆ, ಪ್ರಕರಣವನ್ನು ಇದೀಗ ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಪಾಠಕ್ ಅವರು ಸಮರ್ಥಿಸಿಕೊಂಡಿದ್ದಾರೆ.
0 التعليقات: