Monday, 18 January 2021

ಕುಮಾರಸ್ವಾಮಿ ನನ್ನನ್ನು ಪಕ್ಷದಿಂದ ಹೊರಹಾಕಲಿ : ಶಾಸಕ ಜಿ.ಟಿ. ದೇವೇಗೌಡ ಸವಾಲು


 ಕುಮಾರಸ್ವಾಮಿ ನನ್ನನ್ನು ಪಕ್ಷದಿಂದ ಹೊರಹಾಕಲಿ : ಶಾಸಕ ಜಿ.ಟಿ. ದೇವೇಗೌಡ ಸವಾಲು

ಮೈಸೂರು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಜೆಡಿಎಸ್ ಪಕ್ಷದಿಂದ ಹೊರಹಾಕಲಿ ಎಂದು ಶಾಸಕ ಜಿ.ಟಿ. ದೇವೇಗೌಡ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ನನ್ನನ್ನು ಪಕ್ಷದಿಂದ ಹೊರಹಾಕುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಗಿದ್ದರೆ ನನ್ನನ್ನು ಕುಮಾರಸ್ವಾಮಿ ಪಕ್ಷದಿಂದ ಹೊರಹಾಕಲಿ, ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಲ್ಲೇ ಏನು ನಡೆಯಲಿಲ್ಲ. ಈಗ ನಾನು ಶಾಸಕ ಏನು ಮಾಡಕಾಗುತ್ತೆ ಎಂದರು.

ಎಲ್ಲ ಮೈಸೂರು ಹೈಕಮಾಂಡ್ ಹೇಳಿದಂತೆ ಕುಮಾರಸ್ವಾಮಿ ಕೇಳುತ್ತಿದ್ದಾರೆ. ಸಚಿವನಾಗಿದ್ದಾಗಲೇ ಏನು ನಡೆಯಲಿಲ್ಲ. ಈಗ ನಾನು ಶಾಸಕ. ನಂದು ಏನೂ ನಡೆಯಲ್ಲ. ಜೆಡಿಎಸ್ ಪಕ್ಷದಿಂದ ಕುಮಾರಸ್ವಾಮಿ ಹೊರಹಾಕಲಿ ಎಂದರು.SHARE THIS

Author:

0 التعليقات: