Friday, 8 January 2021

ದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ಸಂಕ್ರಾಂತಿ ಗಿಫ್ಟ್‌: ಶೀಘ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ?


 ದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ಸಂಕ್ರಾಂತಿ ಗಿಫ್ಟ್‌: ಶೀಘ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ!?

ನವದೆಹಲೀ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಈಗ ದಾಖಲೆಯ ಮಟ್ಟವನ್ನು ತಲುಪಿವೆ. ದೆಹಲಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ದರ ಗುರುವಾರ ಲೀಟರ್ ಗೆ 84 ರೂ ದಾಟಿದೆ. ಇದೇ ವೇಳೆಯಲ್ಲಿ ಬೆಲೆ ಏರಿಕೆಯಿಂದ ಬೇಸತ್ತಿರುವ ಜನತೆ ಸರಕಾರ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಗಳಲ್ಲಿ ರಿಯಾಯಿತಿ ಗಳನ್ನು ನೀಡಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಶೇ.50ರಷ್ಟು ಕಡಿತಗೊಳಿಸಲು ಪೆಟ್ರೋಲಿಯಂ ಸಚಿವಾಲಯ ಶಿಫಾರಸು ಮಾಡಿದೆ. ಕೇಂದ್ರ ಸರಕಾರ ಈ ಬಗ್ಗೆ ಗಮನ ನೀಡಿದರೆ ಸಾರ್ವಜನಿಕರಿಗೆ ದೊಡ್ಡ ರಿಲೀಫ್ ಸಿಗಲಿದೆ ಎನ್ನಲಾಗಿದೆ.

ಪೆಟ್ರೋಲ್-ಡೀಸೆಲ್ 5 ರೂ.ವರೆಗೆ ಅಗ್ಗವಾಗಲಿದೆ.

ಅಬಕಾರಿ ಸುಂಕ ಇಳಿಕೆಯಿಂದ ಪೆಟ್ರೋಲ್ ಬೆಲೆ ಲೀಟರ್ ಗೆ 5 ರೂ. ಬಂದ್ ಸಂದರ್ಭದಲ್ಲಿ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ.ಗೆ ಏರಿಕೆ ಮಾಡಿತ್ತು. ಇದರ ಜೊತೆಗೆ ರಾಜ್ಯ ಸರಕಾರಗಳು ವ್ಯಾಟ್ ಅನ್ನು ಹೆಚ್ಚಿಸಿವೆ. ಬೆಲೆ ಇಳಿಕೆಗೆ ರಾಜ್ಯಗಳು ಸಹಕರಿಸಬೇಕು. ವ್ಯಾಟ್ ಕಡಿತ ಮಾಡಲು ಕೇಂದ್ರ ಸರ್ಕಾರ ದೊಂದಿಗೆ ಅವರು ಒಪ್ಪಬೇಕು. ಅಬಕಾರಿ ಸುಂಕ ಕಡಿತ ದಜೊತೆಗೆ, ವ್ಯಾಟ್ ಕಡಿತ ಮತ್ತು ತೈಲ ಕಂಪನಿಗಳಿಗೆ ಸ್ವಲ್ಪ ಹೊರೆಯನ್ನು ಇಳಿಸುವಂತೆ ಕೇಳಲಾಗುವುದು ಎಂದು ಸಚಿವಾಲಯ ಹೇಳಿದೆ.



SHARE THIS

Author:

0 التعليقات: