ಹಿರಿಯ ಸಂಗೀತ ನಿರ್ದೇಶಕ `ಆರ್. ರತ್ನ' ವಿಧಿವಶ
ಚೆನ್ನೈ : ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಂಗೀತ ನಿರ್ದೇಶಕ ಆರ್. ರತ್ನ (97) ಶನಿವಾರ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರತ್ನ ಅವರು ಚೆನ್ನೈನಲ್ಲಿ ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು ಇಲ್ಲೇ ಅಂತ್ಯಕ್ರಿಯೆ ನಡೆಸುವುದಾಗಿ ಅವರ ಪುತ್ರ ವೆಂಕಟರಾಮಯ್ಯ ತಿಳಿಸಿದ್ದಾರೆ.ಬೆಂಗಳೂರಿನಲ್ಲೇ ತಮ್ಮ ಅಂತ್ಯಕ್ರಿಯೆ ಮಾಡಿಸಬೇಕೆಂದು ರತ್ನ ಅವರ ಕೊನೆಯ ಆಸೆಯಾಗಿತ್ತು. ಹೀಗಾಗಿ ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಪತ್ರ ತಿಳಿಸಿದ್ದಾರೆ.
ಅಮ್ಮ ನಿನ್ನ ತೋಳಿನಲಿ ಕಂದಾ ನಾನು, ಹೋಗದಿರಿ ಸೋದರರೇ ಸೇರಿದಂತೆ ಹಲವು ಸಾರ್ವಕಾಲಿಕ ಸೂಪರ್ ಹಿಟ್ ಗೀತೆಗಳನ್ನು ರತ್ನ ಅವರು ನೀಡಿದ್ದಾರೆ.
0 التعليقات: